ಈದ್ ಉಲ್ ಫಿತ್ರ್: ದಾನದ ಹಬ್ಬ

0
525

ಉಮ್ಮು ಫಾತಿಮಾ, ಬೆಂಗಳೂರು

ಈ ರಮಝಾನಿನ ತಿಂಗಳಲ್ಲಿ ಕಠಿಣವಾದ ರಣಬಿಸಿಲ ಝಳವನ್ನೂ ಲೆಕ್ಕಿಸದೆ ಶ್ರೀಮಂತ ಬಡವನೆಂಬ ಬೇಧ-ಭಾವ’ವಿಲ್ಲದೇ ಪ್ರಪಂಚದಾದ್ಯಂತ ಪ್ರತೀಯೊಬ್ಬ ಮುಸಲ್ಮಾನನೂ ತಮ್ಮಿಂದ ಒಂದೇ ಒಂದು ಸಣ್ಣ ತಪ್ಪು, ಅನ್ಯಾಯ, ಅಧರ್ಮತೆಯ ಕೆಲಸ ನಡೆಯದಂತೆ ಸದಾ ಎಚ್ಚರದಿಂದಿದ್ದು.. ಅಷ್ಟೇ ಯಾಕೆ ಜತೆಗೆ ತಮ್ಮ ದೇಹವನ್ನೂ.. ಮನಸ್ಸನ್ನೂ.. ಚಿತ್ತವನ್ನೂ.. ನಿಗ್ರಹಿಸಿ ಸಂಪೂರ್ಣ ಹಿಡಿತದಲ್ಲಿಟ್ಟುಕೊಂಡು ಎಲ್ಲಾ ರೀತಿಯ ಐಚ್ಚಿಕ ಚಟುವಟಿಕೆಗಳನ್ನು ತೊರೆದು.. ಕೇವಲ ಧಾರ್ಮಿಕತೆಯ ಚೌಕಟ್ಟಿನೊಳಗಿದ್ದುಕೊಂಡು ಉಪವಾಸ ವೃತ, ಝಕಾತ್(ಕಡ್ಡಾಯ ಧಾನ), ಅಲ್ಲಾಹುವಿನ ಆರಾದನೆಯಲ್ಲೆ ಹಗಲೂ ರಾತ್ರಿ ತಮ್ಮನ್ನು ತೊಡಗಿಸಿದ್ದುಕೊಂಡು, ರಮಝಾನ್ ತಿಂಗಳು ಕಳೆದು ತದನಂತರ ಬರುವ ಶವ್ವಾಲ್ ತಿಂಗಳ ಮೊದಲ ದಿನದಂದು ಆಚರಿಸುವರು ಈ “ಈದುಲ್ ಫಿತ್ರ್” ಎಂಬ ಹಬ್ಬವನ್ನು.

ರಮಝಾನ್ ತಿಂಗಳು ಕಳೆದು ಶವ್ವಾಲ್ ತಿಂಗಳ ಚಂದ್ರ ದರ್ಶನವಾಗುತ್ತಲೇ ತಿಂಗಳು ಪೂರ್ತಿ ಕೈಗೊಂಡಿದ್ದ ಉಪವಾಸ ವೃತವನ್ನು ಅಂದಿಗೆ ಕೊನೆಗೊಳಿಸಿ ಆ ಕ್ಷಣದಿಂದಲೇ ಹಬ್ಬದ ತಯಾರಿ ನಡೆಸಲಾಗುವುದು. ಇದು ರಮಝಾನ್ ತಿಂಗಳಲ್ಲಿ ಇಪ್ಪತ್ತೊಂಬತ್ತೇ ದಿನ ವೃತ ಹಿಡಿದಿದ್ದರೂ ಸರಿಯೇ.. ಶವ್ವಾಲ್’ನ ಚಂದ್ರ ದರ್ಶನವಾಗುತ್ತಲೇ.. ಉಪವಾಸ ವೃತವನ್ನು ಅಂದಿಗೇ ಕೊನೆಗೊಳಿಸಲಾಗುವುದು. ಅದೇ ತರಾ ರಮಝಾನಿನ ಮುವತ್ತು ದಿನಗಳ ವೃತ ಹಿಡಿದಿದ್ದು ಮಳೆಗಾಲವಾಗಿದ್ದು ಮೋಡ ಮುಸುಕಿರುವ ಕಾರಣದಿಂದ ಚಂದ್ರನು ಕಾಣಸಿಗದಿದ್ದರೂ ಸಹಾ…. ಉಪವಾಸ ವೃತ ಕೈಗೊಂಡು ಮುವತ್ತು ದಿನಗಳು ಪೂರ್ತಿಯಾಗಿದ್ದಲ್ಲಿ.. ಅಲ್ಲಿಗೂ ಉಪವಾಸ ವೃತವು ಕೊನೆಗೊಳ್ಳುವುದು.ಹಾಗೂ ಮಾರನೇ ದಿನ ಹಬ್ಬ ಆಚರಿಸಲೇ ಬೇಕು. ಈ ಹಬ್ಬವನ್ನೇ ‘ಈದ್-ಉಲ್-ಫಿತ್ರ್’ ಅಂತ ಕರೆಯುತ್ತಾರೆ.

ಇದು ಆಹಾರ ಧಾನ್ಯವನ್ನು ಕೊಟ್ಟು ಆಚರಿಸುವ ಹಬ್ಬವಾಗಿರುತ್ತದೆ.

ತಿಂಗಳು ಪೂರ್ತಿ ಉಪವಾಸ ಹಿಡಿದ ಮನುಷ್ಯನಿಗಿದೀಗ ಚೆನ್ನಾಗಿ ದಾಹ-ಹಸಿವಿನ ಅರಿವು ಉಂಟಾಗುತ್ತದೆ. ಹಾಗೆಯೇ.. ಪ್ರತೀಯೊಬ್ಬನೂ.. ಈದುಲ್ ಫಿತ್ರ್’ಗೆ ಆಹಾರ ಧಾನ್ಯ ಧಾನ ಕೊಟ್ಟು ಬಡವರಿಗೂ ಹಬ್ಬವನ್ನು ಆಚರಿಸಲು ಸಹಾಯಮಾಡಲೇ ಬೇಕೆಂದು ಇಸ್ಲಾಂ ಆದೇಶಿಸುತ್ತದೆ.

ಅದೇ .. ರೀತಿ ಪ್ರತೀಯೊಬ್ಬ ಅನುಕೂಲವಂತನಲ್ಲಿ “ಸದ್ಕ-ಝಕಾತ್” (ದಾನ-ಕಡ್ಡಾಯ ದಾನ) ಕೊಡಬೇಕೆಂದೇ ಖಡಾಖಂಡಿತವಾಗಿ ಸಾರಿ ಸಾರಿ ಹೇಳಿದೆ. ಇಸ್ಲಾಮಿನ ಐದು ಪ್ರಧಾನ ಸ್ಥಂಭಗಳಲ್ಲಿ ಮೂರನೇಯದಾಗಿರುತ್ತದೆ ಈ ಝಕಾತ್(ಕಡ್ಡಾಯ ದಾನ). ಪ್ರತೀಯೊಬ್ಬ ಮುಸಲ್ಮಾನ ತನ್ನಲ್ಲಿರುವ ಆಸ್ತಿ, ಸೊತ್ತುಗಳು, ಒಡವೆ ಆಭರಣಗಳನ್ನೊಳಗೊಂಡು ಪ್ರತೀಯೊಂದಕ್ಕೂ ಇಸ್ಲಾಮಿನ ವಿಧಿ ವಿಧಾನದನುಸಾರವೇ..ಲೆಕ್ಕ ಮಾಡಿ ಪ್ರತೀ ವರುಷವೂ ಕೊಟ್ಟೇ ತೀರ ಬೇಕಾದುದಾಗಿದೆ ಈ “ಝಕಾತ್”. ಹೌದು ! ಬಡವನ ಹಸಿವು-ಬಾಯಾರಿಕೆ ಎಂದರೇನೆಂದು ಪ್ರತೀಯೊಬ್ಬರಿಗೂ ಚೆನ್ನಾಗಿ ಅರ್ಥವಾಗುವುದು ರಮಝಾನಿನಲ್ಲಿಯೇ.

ಅದೇ ರೀತಿ ಉಪವಾಸ ಮುಗಿದು ಬರುವ ಹಬ್ಬವನ್ನೂ ಕೂಡ ಬಡವನಿಗೆ ಆಹಾರ ಧಾನ್ಯ ವಿತರಿಸಿ ಎಲ್ಲರು ಒಗ್ಗಟ್ಟಿನಲ್ಲಿ ಚೆನ್ನಾಗಿ ಹಬ್ಬ ಆಚರಿಸುವಂತಾಗಬೇಕೆಂದೇ.. ದಾನದಲ್ಲಿ ಕೊಡುವ ಆಹಾರ ಧಾನ್ಯಗಳನ್ನು ಹಬ್ಬದ ಚಂದ್ರ ದರ್ಶನವಾದಾಗಿನಿಂದ ಕೊಡಲು ಶುರುಹಚ್ಚಿಕೊಂಡು ಹಬ್ಬದ ದಿನ ಬೆಳಿಗ್ಗೆ ಮಸೀದಿಗೆ ಹೊರಡುವ ಮುನ್ನ ಕೊಟ್ಟು ಮುಗಿಸಲೇಬೇಕೆಂದು ಇಂತಿಂತ ಸಮಯ ವಿಧಾನವನ್ನೂ ಇಸ್ಲಾಂ ತಿಳಿಸಿಕೊಟ್ಟಿದೆ.

ವಿಶೇಷವೆಂದರೇ.. ಈ ಝಕಾತ್ ಪ್ರತೀಯೊಬ್ಬನ ಮೇಲೂ ಕಡ್ಡಾಯವಾಗಿರುತ್ತದೆ. ಒಂದು ಮನೆಯಲ್ಲಿ ಹತ್ತು ಜನರಿದ್ದಲ್ಲಿ ಹತ್ತೂ ಜನರ ಹೆಸರಲ್ಲೂ ಇಸ್ಲಾಮಿ’ನಲ್ಲಿ ತಿಳಿಸಿದ ಲೆಕ್ಕಾನುಸಾರ ಕಡ್ಡಾಯವಾಗಿ ಝಕಾತ್ ಕೊಡಲೇ ಬೇಕು. ಅದೂ ಝಕಾತ್ ಪಡೆಯುವವರ ಆಹಾರ ಪದ್ದತಿಯನ್ನರಿತು ಅವರಿಗೆ ಅವರ ಊರಿನ ಆಹಾರ ಪದ್ದತಿಯಂತೇ ಝಕಾತ್ ನೀಡಬೇಕೆಂದೂ ಆದೇಶಿಸಿದೆ. “ಯಾರಿಗೆ ಈ ಝಕಾತ್ ಕೊಡಲು ಸಾಧ್ಯವಿಲ್ಲವೋ ಅವರು ಈ ಝಕಾತ್ ಪಡೆಯಲರ್ಹರಾಗಿರುವರು.”
ಹಾಗಾದ್ರೆ ಚಿಂತಿಸಿ ನೋಡಿ ಪ್ರಪಂಚದಾಂದ್ಯಂತೆಲ್ಲಾ ಈ ಫಿತ್ರ್ ಝಕಾತ್(ಧಾನ್ಯ ಧಾನ) ನೀಡಲು ಅರ್ಹತೆ ಇರುವ ವ್ಯಕ್ತಿಗಳೆಲ್ಲರೂ ಈ ಝಕಾತ್’ಅನ್ನು ನೀಡಿದಾಗ ಹಸಿದಿದ್ದ ಬಡವರು ಕನಿಷ್ಠ ಐದಾರು ದಿನಗಳಾದರು ಹೊಟ್ಟೆ ತುಂಬಾ ಉಂಡು ಬಹಳವೇ ಸಂತೋಷ ನೆಮ್ಮದಿಯಿಂದ ಇರಬಹುದಲ್ಲವೇ..? ಬೇಡವಾದುದನ್ನೆಲ್ಲಾ ಅನಾವಶ್ಯಕ ಆಡಂಬರದಿಂದ ಆಚರಿಸಿ ಹಣ ಪೋಲುಮಾಡುವ ಬದಲು ಝಕಾತ್, ಸದಕಾ ಎಂದು ದಾನ ಕೊಡುವುದನ್ನೆ ಅಭ್ಯಾಸ ಮಾಡಿಕೊಂಡು ಬಂದಲ್ಲೀ..ಈ ಪ್ರಪಂಚದಲ್ಲಿ ಹಸಿವು ದಾಹಗಳ ಕಂದಕದಿ ಬೆಂದು ದಿನನಿತ್ಯ ಸಾಯುವವರ ಸಂಖ್ಯೆ ಅದೆಷ್ಟೊಂದು ಕಡಿಮೆಯಾಗ ಬಹುದಲ್ಲವೇ..?