ಹುಟ್ಟೂರಿನಲ್ಲಿ ಮುರ್ಸಿ ಅಂತ್ಯ ಸಂಸ್ಕಾರ ನಡೆಸಲು ಅನುಮತಿ ನಿರಾಕರಿಸಿದ ಈಜಿಪ್ಟ್ ಆಡಳಿತ

0
443

ಕೈರೊ, ಜೂ.18: ಈಜಿಪ್ಟ್ ನ ಮಾಜಿ ಅಧ್ಯಕ್ಷ ಮುಹಮ್ಮದ್ ಮುರ್ಸಿಯವರ ಮೃತದೇಹ ಸಂಸ್ಕಾರ ಕಾರ್ಯ ಕೈರೊದ ನಸರ್ ನಗರದಲ್ಲಿ ನಡೆಯಿತು ಎಂದು ಅವರ ಪುತ್ರ ಅಹಮ್ಮದ್ ಮುರ್ಸಿ ಫೇಸ್‍ಬುಕ್ ಮೂಲಕ ತಿಳಿಸಿದ್ದಾರೆ. ಅವರ ಸಹಿತ ಬಂಧುಗಳು ಮೃತದೇಹ ಸಂಸ್ಕಾರ ಕಾರ್ಯದ ವೇಳೆ ಉಪಸ್ಥಿತರಿದ್ದರು. ಹಿರಿಯ ಮುಸ್ಲಿಂ ಬ್ರದರ್ ಹುಡ್ ನಾಯಕರ ಮೃತದೇಹ ಸಂಸ್ಕಾರವು ಇಲ್ಲಿಯೇ ನಡೆದಿದೆ. ಮುರ್ಸಿಯವರ ಹುಟ್ಟೂರು ಶರ್ಕಿಯ ಪ್ರಾಂತದಲ್ಲಿ ಮೃತದೇಹ ಸಂಸ್ಕಾರ ನಡೆಸಲು ಬಂಧುಗಳು ಆಗ್ರಹಿಸಿದ್ದರು. ಆದರೆ ಈಜಿಪ್ಟ್ ಸರಕಾರ ಇದಕ್ಕೆ ಅನುಮತಿ ನೀಡಲಿಲ್ಲ.

ಮೃತದೇಹವನ್ನು ಸಂಸ್ಕಾರ ಕಾರ್ಯಕ್ಕೆ ನಮಗೆ ಈಜಿಪ್ಟ್ ಸರಕಾರ ಬಿಟ್ಟುಕೊಡುವುದಿಲ್ಲ ಎಂದು ಅವರ ಪುತ್ರ ಅಹಮ್ಮದ್ ಈ ಹಿಂದೆ ಆರೋಪಿಸಿದ್ದರು. ಮುಹಮ್ಮದ್ ಮುರ್ಸಿ ವಿಚಾರಣೆಯ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಅಧಿಕೃತವಾಗಿ ಸುದ್ದಿ ನೀಡಲಾಗಿತ್ತು. ಮುರ್ಸಿ 2011ರ ಅರಬ್ ಕ್ರಾಂತಿಯ ಬೆನ್ನಿಗೆ ಈಜಿಪ್ಟ್‍ನ ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಯಾದ ಪ್ರಥಮ ಅಧ್ಯಕ್ಷರಾಗಿದ್ದಾರೆ.