ಈಜಿಪ್ಟ್ ನಲ್ಲಿ ಕೈದಿಗಳನ್ನು ಭೇಟಿಯಾಗದಂತೆ ಕುಟುಂಬಗಳಿಗೆ ನಿಷೇಧ

0
468

ಕೈರೊ, ಜೂ.22: ಮಾಜಿ ಅಧ್ಯಕ್ಷ ಮುಹಮ್ಮದ್ ಮುರ್ಸಿಯವರ ನಿಧನದ ಬಳಿಕ ಈಜಿಪ್ಟ್ ಜೈಲಿನಲ್ಲಿರುವ ಕೈದಿಗಳನ್ನು ಅವರ ಕುಟುಂಬ ಸದಸ್ಯರು ಭೇಟಿಯಾಗದಂತೆ ನಿಷೇಧ ಹೇರಲಾಗಿದೆ. ಲಂಡನ್ ಕೇಂದ್ರವಾಗಿರುವ ಅಲ್ ಅರಬಿ ಅಲ್ ಜದೀದ್ ಪತ್ರಿಕೆ ವರದಿ ಪ್ರಕಾರ ಈಜಿಪ್ಟ್ ವಿದೇಶ ಸಚಿವ ಜನರಲ್ ಮಹಮೂದ್ ತೌಫೀಕ್ ಹೊಸ ಆದೇಶ ಹೊರಡಿಸಿದ್ದಾರೆ.

ವಿವಿಧ ಆರೋಪಗಳನ್ನು ಹೊರಿಸಿ ಈಜಿಪ್ಟ್ ಸರಕಾರ ಜೈಲಿಗೆ ಹಾಕಿರುವ ಕೈದಿಗಳನ್ನು ಸಂದರ್ಶಿಸದಂತೆ ಅಧಿಕಾರಿಗಳು ತಡೆಯುತ್ತಿದ್ದಾರೆ. ನಿಷೇಧದ ವಿರುದ್ಧ ಕೈದಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಮಾತ್ರವಲ್ಲ ಕೈದಿಗಳ ಜೈಲುವಾಸ ಅವಧಿಯನ್ನು ಎದುರು ಕಕ್ಷಿಗಳು, ವಕೀಲರು ಇಲ್ಲದೆಯೇ ಜನರಲ್ ಪ್ರಾಸಿಕ್ಯೂಶನ್ ಹೆಚ್ಚಿಸುತ್ತಿದ್ದು ಇದನ್ನು ಕೈದಿಗಳ ಬಂಧುಗಳು ವಿರೋಧಿಸುತ್ತಿದ್ದಾರೆ. ಮುಹಮ್ಮದ್ ಮುರ್ಸಿ ವಿಚಾರಣೆಯ ವೇಳೆ ಕೋರ್ಟಿನಲ್ಲಿ ಮೃತಪಟ್ಟಿದ್ದರು. ನಂತರ ಹೊಸ ನಿಯಂತ್ರಣಗಳನ್ನು ಈಜಿಪ್ಟ್ ಸರಕಾರ ಹೇರುತ್ತಿದೆ.