ರಫಾ ದಾಟನ್ನು ಮುಚ್ಚಿದ ಈಜಿಪ್ಟ್; ಗಾಝಾದಲ್ಲಿ ಫೇಲಸ್ತೀನಿಯರನ್ನು ಬಂಧಿಸುವ ಹುನ್ನಾರ

0
553

ಈಜಿಪ್ಟಿನ ಅಧಿಕಾರಿಗಳು ಪ್ರದೇಶದ ಏಕೈಕ ದಾರಿಯನ್ನು ಮುಚ್ಚಿದ ಹಿನ್ನಲೆಯಲ್ಲಿ ಗಾಝ ಪಟ್ಟಿಯಲ್ಲಿರುವ ಫೆಲಸ್ತೀನಿಯನ್ನರು ಪ್ರಾಂತ್ಯವನ್ನು ಬಿಟ್ಟು ಹೋಗಲಾರೆವೆಂದು ಮುತ್ತಿಗೆ ಹಾಕಿದ್ದಾರೆ. ದೀರ್ಘಕಾಲದ ಸರ್ವಾಧಿಕಾರಿ ಮತ್ತು ಅಧ್ಯಕ್ಷ ಹುಸ್ನಿ ಮುಬಾರಕ್ ರನ್ನು ಪದಚ್ಯುತಿಗೊಳಿಸಲು ಕಾರಣವಾದ ಜನವರಿ 25 ರ ಕ್ರಾಂತಿಯ ವಾರ್ಷಿಕೋತ್ಸವಕ್ಕೂ ಮೊದಲು ಗುರುವಾರ ಅಧಿಕಾರಿಗಳು ಈ ದಾಟನ್ನು ಮುಚ್ಚಿದ್ದಾರೆ.

ಕಳೆದ ವರ್ಷ ಬೇಸಿಗೆಯಲ್ಲಿ ಈಜಿಪ್ಟ್ ಈ ದಾಟನ್ನು ಪುನಃ ತೆರೆದಿದೆಯಾದರೂ ಫೆಲೆಸ್ತೀನ್ ಪ್ರಾಧಿಕಾರ ತನ್ನ ಅಧಿಕಾರಿಗಳನ್ನು ಗಡಿಯಿಂದ ಹಿಂತೆಗೆದುಕೊಂಡ ನಂತರ ಜನವರಿ ಆರ ರಂದು ಪುನಃ ಮುಚ್ಚಲಾಯಿತು. ಅನಂತರ ಈಜಿಪ್ಟ್ ನಿಂದ ಗಾಝಾಕ್ಕೆ ಹಿಂದಿರುಗಲು ಬಯಸುವ ಫೆಲೆಸ್ತೀನಿಯರಿಗಾಗಿ ಮಾತ್ರ ಅದನ್ನು ತೆರೆಯಲಾಯಿತು.