ವಿವಿಪ್ಯಾಟ್: ಚುನಾವಣಾ ಆಯೋಗ ಸುಪ್ರೀಂ ಕೋರ್ಟಿನಲ್ಲಿ ಸುಳ್ಳು ಹೇಳಿದೆ- ಕಾರವಾನ್ ಪತ್ರಿಕಾ ವರದಿ

0
804
People walk past the Election Commission of India office building in New Delhi, India March 11, 2019. REUTERS/Adnan Abidi - RC1EBC05C7F0

ಹೊಸದಿಲ್ಲಿ, ಮೇ 21: ಚುನಾವಣಾ ಆಯೋಗ ವಿವಿಪ್ಯಾಟ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನಲ್ಲಿ ಸುಳ್ಳು ಹೇಳಿದೆ ಎಂದು ಕಾರವಾನ್ ಪತ್ರಿಕೆ ವರದಿ ಮಾಡಿದೆ. ವಿವಿಪ್ಯಾಟ್ ಕುರಿತು ಕಳೆದ ಎರಡು ವರ್ಷಗಳಲ್ಲಿ ಯಾವ ದೂರು ಕೇಳಿ ಬಂದಿಲ್ಲ ಎಂದು ಆಯೋಗ ಸುಪ್ರೀಂ ಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿದ್ದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಹಲವು ಸ್ಥಳಗಳಲ್ಲಿ ಮತಯಂತ್ರ ಮತ್ತು ವಿವಿಪ್ಯಾಟ್‌ನ ಮತಗಳನ್ನು ಹೋಲಿಸಿ ನೋಡಿದಾಗ ವ್ಯತ್ಯಾಸಗಳಾಗಿವೆ ಎಂದು ಕಾರವಾನ್ ಪತ್ರಿಕೆ ವರದಿಯಲ್ಲಿದೆ.

ಚುನಾವಣೆಯಲ್ಲಿ ಮತ ಯಂತ್ರಗಳ ಜತೆ ಶೇ.50ರಷ್ಟು ಮತ ಯಂತ್ರಗಳನ್ನು ತನಿಖೆ ಗೊಳಪಡಿಸಬೇಕೆಂದು 21 ಪ್ರತಿಪಕ್ಷ ಪಾರ್ಟಿಗಳು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದಾಗ ಚುನಾವಣಾ ಆಯೋಗ ಮೇಲಿನಂತೆ ಅಫಿದಾವಿತ್ ಸಲ್ಲಿಸಿತ್ತು. ಈ ಅಫಿದಾವಿತ್ ಆಧಾರದಲ್ಲಿ ಸುಪ್ರೀಂಕೋರ್ಟು ಪ್ರತಿಪಕ್ಷಗಳ ವಾದವನ್ನು ತಳ್ಳಿ ಹಾಕಿತ್ತು. ಲೋಕಸಭಾ ಉಪಚುನಾವಣೆಯ ವೇಳೆ 1500 ಮತಗಟ್ಟೆಗಳಲ್ಲಿ ವಿವಿಪ್ಯಾಟ್ ಸ್ಲಿಪ್‍ಗಳನ್ನು ಹೋಲಿಸಿ ನೋಡಿದಾಗ ಯಾವ ದೂರುಗಳೂ ಲಭಿಸಿಲ್ಲ ಎಂದು ಚುನಾವಣಾ ಆಯೋಗದ ಉಪಾಯುಕ್ತ ಸುದೀಪ್ ಜೈನ್ ಅಫಿದಾವಿತ್ ಸಲ್ಲಿಸಿದ್ದರು.

ಆದರೆ 217ರ ನಂತರ ನಡೆದಿರುವ ವಿವಿಧ ವಿಧಾನಸಭಾ ಚುನಾವಣೆಗಳಲ್ಲಿ ಮತ್ತು ಲೋಕಸಭಾ ಚುನಾವಣೆಗಳಲ್ಲಿ ವಿವಿಪ್ಯಾಟ ಸ್ಲಿಪ್‍ಗಳನ್ನು ಪರಿಶೀಲಿಸಿದಾಗ ದ್ವಾರಕಾ, ಭಾವ್‍ನಗರ ಗ್ರಾಮಾಂತರ, ವಾಗ್ರ, ಅಂಗಲೇಶ್ಯರ್‍ಗಳಲ್ಲಿ ತಾಳೆಯಾಗದ ಪ್ರಸಂಗಗಳು ದಾಖಲಾಗಿವೆ ಎಂದು ಚೀಫ್ ಎಲೆಕ್ಟ್ರಾಲ್ ಅಧಿಕಾರಿಗಳು ಹೇಳಿದ್ದರು. ಕರ್ನಾಟಕದ ಹುಬ್ಬಳ್ಳಿ,ಧಾರವಾಡ ಕ್ಷೇತ್ರದಲ್ಲಿ ಇಂತಹ ಪ್ರಸಂಗ ವರದಿಯಾಗಿತ್ತು. ಆದರೂ ಚುನಾವಣಾ ಆಯೋಗ ವಿವಿಪ್ಯಾಟ್‌ಗೆ ಸಂಬಂಧಿಸಿ ಯಾವ ದೂರುಗಳು ಬಂದಿಲ್ಲ ಎಂದು ಚುನಾವಣಾ ಆಯೋಗ ಕೋರ್ಟಿಗೆ ತಿಳಿಸಿತ್ತು.