ಸೋಲಿನ ಬೆನ್ನಿಗೆ ಕಾಂಗ್ರೆಸ್‍ನಲ್ಲಿ ಸಾಮೂಹಿಕ ರಾಜೀನಾಮೆ!

0
638

ಹೊಸದಿಲ್ಲಿ: ನಿರಂತರ ಎರಡನೆ ಬಾರಿ ಲೋಕಸಭಾ ಚುನಾವಣೆಯಲ್ಲಿ ಭಾರೀ ಸೋಲು ಎದುರಿಸಿರುವ ಕಾಂಗ್ರೆಸ್‍ನಲ್ಲಿ ಸಾಮೂಹಿಕ ರಾಜೀನಾಮೆ ಕಂಡು ಬರುತ್ತಿದೆ. ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಸಹಿತ ಮೂರು ರಾಜ್ಯಗಳ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ರಾಜ್‍ ಬಬ್ಬರ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ ಗಾಂಧಿಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ರಾಹುಲ್ ಗಾಂಧಿ ಕೂಡ ಸಿದ್ಧ ಎಂದು ಎಂದಿದ್ದು ಶನಿವಾರ ರಾತ್ರೆ ಕಾಂಗ್ರೆಸ್ ಕಾರ್ಯಕಾರಣಿಯಲ್ಲಿ ಈ ವಿಷಯ ಚರ್ಚೆಗೆ ಬರಲಿದೆ. ಪರಂಪರಾಗತ ಲೋಕಸಭಾ ಕ್ಷೇತ್ರ ಅಮೇಠಿಯಲ್ಲಿ ರಾಹುಲ್‍ರ ಸೋಲು ರಾಹುಲ್‍ರಿಗೆ ದೊಡ್ಡ ಮಟ್ಟದ ಹಿನ್ನಡೆಯಾಗಿದೆ. ಕರ್ನಾಟಕದ ಪ್ರಚಾರ ಸಮಿತಿ ಮುಖ್ಯಸ್ಥ ಎಚ್‍ಕೆ ಪಾಟೀಲ್, ಒಡಿಸ್ಸಾದ ಅಧ್ಯಕ್ಷ ನಿರಂಜನ್ ಪಟ್ನಾಯಕ್ ಈಗಾಗಲೇ ರಾಜೀನಾಮೆ ಕೊಟ್ಟಿದ್ದಾರೆ. ಕರ್ನಾಟಕ , ಒರಿಸ್ಸದಲ್ಲಿ ಕಾಂಗ್ರೆಸ್ ನಾಮಾವಶೇಷವಾಗಿದೆ. ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಮತ್ತು ಜ್ಯೋತಿರಾದಿತ್ಯ ಸಿಂಧ್ಯ ಪೂರ್ಣ ಕಾಲಿಕ ಪ್ರಚಾರ ನಡೆಸಿ ಕೇವಲ ರಾಯ್‍ಬರೇಲಿಯಲ್ಲಿ ಮಾತ್ರ ಗೆಲುವು ಸಾಧ್ಯವಾಗಿದೆ. ಇದು ಕಾಂಗ್ರೆಸ್‌ಗೆ ಬಹುದೊಡ್ಡ ಹಿನ್ನಡೆಯಾಗಿದೆ. ಪತೇಹಪುರ ಸಿಕ್ರಿಯಲ್ಲಿ ರಾಜ್‍ಬಬ್ಬರ್ ಸ್ವಯಂ ಸೋತಿದ್ದಾರೆ.