ಮತಯಂತ್ರದಿಂದ ಮೋಸ: ಅರ್ಜಿ ವಜಾ

0
664

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 3: ಮತಯಂತ್ರದಲ್ಲಿ ಮೋಸ ಮಾಡಲು ಸಾಧ್ಯ ಎಂಬುದನ್ನು ಸಾಬೀತು ಪಡಿಸಲು ಅವಕಾಶ ನೀಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಆದೇಶ ನೀಡಬೇಕೆಂದು ಆಗ್ರಹಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟು ತಿರಸ್ಕರಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಡಿಂಡಿಗಲ್ ಕ್ಷೇತ್ರದಲ್ಲಿ ಸೋತಿದ್ದ ಮನ್ಸೂರ್ ಅಲಿಖಾನ್ ಅರ್ಜಿ ಸಲ್ಲಿಸಿದ್ದರು. ಚೀಫ್ ಜಸ್ಟಿಸ್ ಬೋಬ್ಡೆಯ ಅಧ್ಯಕ್ಷತೆಯ ಪೀಠ ಅರ್ಜಿಯನ್ನು ವಜಾ ಮಾಡಿದೆ.

ಚುನಾವಣೆಯ ನಿಯಮದಂತೆ ಮತಯಂತ್ರ ಕೈವಶ ಇರಿಸಲು ಅದರ ಸಾಫ್ಟ್ ವೇರ್ ನಲ್ಲಿ ಯಾವುದೇ ಬದಲಾವಣೆ ನಡೆಸಲು ಯಾರಿಗೂ ಅಧಿಕಾರವಿಲ್ಲ. ಮತ ಯಂತ್ರದಲ್ಲಿ ಬದಲಾವಣೆ ನಡೆಸಲು ಸಾದ್ಯ ಎಂದು ತೋರಿಸಿದ ಇಂಜಿನಿಯರ್ ವಿರುದ್ಧ ಮತಯಂತ್ರ ಕದ್ದ ಆರೋಪದಲ್ಲಿ ಕೇಸು ಹಾಕಲಾಗಿತ್ತು. ಮತಯಂತ್ರದ ವಿರುದ್ಧ ವ್ಯಾಪಕ ದೂರು ಕೇಳಿ ಬಂದ ಹಂತದಲ್ಲಿ ಬದಲಾವಣೆ ಕೃತ್ಯವನ್ನು ಸಾಬೀತುಪಡಿಸಲು ಚುನಾವಣಾ ಆಯೋಗವು ಹ್ಯಾಕ್‍ಥಾನ್‍ಗೆ ಸವಾಲು ಹಾಕಿದಾಗ ರಾಜಕೀಯ ಪಾರ್ಟಿಗಳಿಗೆ ಮತಯಂತ್ರಗಳನ್ನು ಮುಟ್ಟಲು ಅವಕಾಶ ನೀಡುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮತಯಂತ್ರ ಬದಲಾವಣೆಯನ್ನು ಸಾಬೀತುಪಡಿಸಲು ಅನುಮತಿ ನೀಡುವಂತೆ ಆಯೋಗಕ್ಕೆ ಆದೇಶಿಸಬೇಕೆಂದು ಮನ್ಸೂರ್ ಖಾನ್ ಅರ್ಜಿ ಸಲ್ಲಿಸಿದ್ದರು. ಅದೀಗ ತಿರಸ್ಕೃಗೊಂಡಿದೆ.