ಆನೆಗಳ ಸಾಮೂಹಿಕ ಸಾವಿಗೆ ಬ್ಯಾಕ್ಟೀರಿಯ ಕಾರಣ

0
444

ಸನ್ಮಾರ್ಗ ವಾರ್ತೆ

ಗಾಬರೋನ್,ಸೆ.22: ಆಫ್ರಿಕ ಭೂಖಂಡದ ಒಟ್ಟು ಆನೆಗಳ ಮೂರರಲ್ಲೊಂದು ಭಾಗ ಇರುವ ಬೊಟ್ಸ್ವಾನದಲ್ಲಿ ಆನೆಗಳ ಸಾಮೂಹಿಕ ಸಾವು ವರದಿಯಾಗಿದ್ದು ಇದಕ್ಕೆ ಬ್ಯಾಕ್ಟೀರಿಯ ಕಾರಣವೆಂಬುದಾಗಿ ತಿಳಿದು ಬಂದಿದೆ. ಸಯನೊ ಬ್ಯಾಕ್ಟೀರಿಯ ನೀರಿನಲ್ಲಿ ಕದಡಿದ್ದು ಆನೆಗಳ ಸಾವಿಗೆ ಕಾರಣವೆಂದು ಸರಕಾರ ಪತ್ತೆಹಚ್ಚಿದೆ. ಈ ಬ್ಯಾಕ್ಟ್ರೀರಿಯ ನೀರನ್ನು ವಿಷಯುಕ್ತಗೊಳಿಸುತ್ತದೆ ಎಂದು ವೈಲ್ಡ್‌ ಲೈಫ್ ಆಂಡ್ ನ್ಯಾಶನಲ್ ಪಾಕ್ರ್ಸ್ ಡಿಪಾರ್ಟ್ಮೆಂಟ್ ಪ್ರಿನ್ಸಿಪಾಲ್ ವೆಟರಿನರಿ ಆಫಿಸರ್ ಮಾದಿ ರೂಬನ್ ತಿಳಿಸಿದ್ದಾರೆ.

ಆನೆಯ ಶವವನ್ನು ಪರೀಕ್ಷಿಸಿದಾಗ ಮತ್ತು ನೀರಿನ ಸ್ಯಾಂಪಲ್ ಸಂಗ್ರಹಿಸಿ ನೋಡಿದಾಗ ಆನೆಗಳ ಸಾವಿಗೆ ಬ್ಯಾಕ್ಟೀರಿಯಗಳು ಕಾರಣವೆಂದು ಗೊತ್ತಾಗಿದೆ. ಆನೆಗಳ ಸಾವಿನ ಕುರಿತು ವಿಮಾನಗಳ ಮೂಲಕ ಅಧ್ಯಯನ ನಡೆಸಲಾಗಿದೆ. ಇದೇವೇಳೆ, ಈ ನೀರು ಕುಡಿದ ಇತರ ಜೀವಿಗಳು ಸಾಯದೆ ಆನೆಗಳು ಮಾತ್ರ ಸಾಯಲು ಕಾರಣವೇನೆಂಬ ಪ್ರಶ್ನೆಗೆ ಉತ್ತರ ಲಭ್ಯವಾಗಿಲ್ಲ. ಜುಲೈ ತಿಂಗಳಲ್ಲಿ 281 ಆನೆಗಳು ಇಲ್ಲಿ ಸತ್ತಿದ್ದು ತದನಂತರ ಸರಕಾರ ತನಿಖೆ ಆರಂಭಿಸಿತ್ತು. ಇದುವರೆಗೆ 330 ಆನೆಗಳು ಸತ್ತಿವೆ ಎಂದು ಅಧಿಕಾರಿಳು ತಿಳಿಸಿದ್ದಾರೆ. ಬೊಟ್ಸಾವಾನದಲ್ಲಿ 1.30 ಲಕ್ಷ ಆನೆಗಳಿವೆ.