ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಪೊಕ್ಸೋ ಪ್ರಕರಣದಲ್ಲಿ ಮಾಜಿ ಶಾಸಕನ ಬಂಧನ

0
509

ಸನ್ಮಾರ್ಗ ವಾರ್ತೆ

ತಮಿಳ್ನಾಡು,ಜು.30: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಎರಡು ವರ್ಷ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ನಾಗರಕೊವಿಲ್ ಮಾಜಿ ಶಾಸಕ ನಾಂಚಿಲ್ ಮುರುಗೇಶನ್‍ನ್ನು ಪೊಕ್ಸೋ ಕಾಯಿದೆಯಡಿಯಲ್ಲಿ ಬಂಧಿಸಲಾಗಿದೆ. ಬಾಲಕಿಯ ತಾಯಿ ಸಹಿತ ನಾಲ್ವರು ಪ್ರಕರಣದಲ್ಲಿ ಬಂಧಿಸಲಾಗಿದೆ.

ಭೂಗತನಾಗಿದ್ದ ಮುರುಗೇಶನನ್ನು ಪತ್ತೆ ಹಚ್ಚುವುದರಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇತರ ಬಂಧಿತರನ್ನು ಇಡಲಾಕ್ಕುಡಿಯ ಪಾಲ್(66), ಅಶೋಕ್‍ಕುಮಾರ್(43) ಕೋಟ್ಟಾರಿನ ಕಾರ್ತಿಕ್(28) ಎಂದು ಗುರುತಿಸಲಾಗಿದೆ.

ಮಗಳನ್ನು ಅಪಹರಿಸಲಾಗಿದೆ ಎಂದು ಬೆಟ್ಟುಮಾಡಿ ಬಾಲಕಿಯ ತಾಯಿ ಮಹಿಳಾ ಪೊಲೀಸರಿಗೆ ದೂರು ನೀಡಿದ್ದು ಇದರ ಆಧಾರದಲ್ಲಿ ಬಾಲಕಿ ಮತ್ತು ಯುವಕನನ್ನು ಬಂಧಿಸಿ ಪೊಲೀಸರು ವಿಚಾರಿಸಿದಾಗ ಮಾಜಿ ಶಾಸಕರು ಅತ್ಯಾಚಾರ ಮಾಡಿದ್ದನ್ನು ಬಾಲಕಿ ತಿಳಿಸಿದ್ದಾಳೆ. ಇದಕ್ಕೆ ತಾಯಿಯೇ ಸಹಾಯ ಮಾಡಿದ್ದರು ಎಂದು ಹೇಳಿದ್ದಳು.

ಬಾಲಕಿಯ ಹೇಳಿಕೆಯ ಆಧಾರದಲ್ಲಿ ಮಂಗಳವಾರ ನಾಲ್ವರನ್ನು ಪೊಲೀಸರು ಬಂಧಿಸಿ ಕರೆ ತಂದಿದ್ದರು. ನಂತರ ಅಡಗಿ ಕೂತಿದ್ದ ಮಾಜಿ ಶಾಸಕನನ್ನು ತುತ್ತುಕುಡಿ ಉವರಿಯಿಂದ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ

LEAVE A REPLY

Please enter your comment!
Please enter your name here