ಬಿಜೆಪಿ ನಾಯಕನ ಮನೆಯಂಗಳದಲ್ಲಿ ಸ್ಫೋಟ; ಇಬ್ಬರು ವಿದ್ಯಾರ್ಥಿಗಳಿಗೆ ಗಾಯ

0
507

ಕೋಝಿಕ್ಕೋಡ್,ಮೇ 14: ಕೊಡುವಳ್ಳಿಯಲ್ಲಿ ಬಿಜೆಪಿ ನಾಯಕ ಸದಾಶಿವನ್ ಎಂಬವರ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಸ್ಫೋಟಕ ಸಿಡಿದು ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳಾದ ಅದೀಬ್ ರಹ್ಮಾನ್(10) ಮತ್ತು ಜಿತೇವ್(8)ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ಬೆಳಗ್ಗೆ ಎಂಟೂವರೆ ಗಂಟೆಗೆ ಘಟನೆ ನಡೆದಿದೆ. ಬಿಜೆಪಿ ನಾಯಕನ ಮನೆಯು ಮಕ್ಕಳ ಮನೆಯ ಸಮೀಪದಲ್ಲಿದೆ. ಸದಾಶಿವನ್‍ರ ಮನೆಯ ಅಂಗಳದಲ್ಲಿ ಉಗ್ರ ಸ್ಫೋಟಕ ಸ್ಫೋಟಕವಾಗಿದೆ. ಮಕ್ಕಳ ಕೈ, ಮುಖಭಾಗಕ್ಕೆ ಗಾಯಗಳಾಗಿವೆ. ಆದರೆ ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ. ಸದಾಶಿವನ್‍ರ ಮನೆಯ ಮುಂಭಾಗದಲ್ಲಿದ್ದ ಟೀಪಾಯ್‍ನಲ್ಲಿ ಸಿಕ್ಕಿದ ವಸ್ತುಗಳಿಗೆ ಮಕ್ಕಳು ಬೆಂಕಿ ಕೊಟ್ಟಿದ್ದರು. ಮನೆಗೆ ಸ್ಫೋಟಕ ವಸ್ತು ಬಂದದ್ದು ನಿಗೂಢವಾಗಿದೆ. ತನಿಖೆ ನಡೆಯಬೇಕೆಂದು ಸ್ವತಃ ಸದಾಶಿವನ್‍ರವರೇ ಆಗ್ರಹಿಸಿದ್ದಾರೆ. ಕೇಸು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.