ಮ್ಯಾನ್ಮಾರ್ ಸೇನಾ ಫೇಸ್‌ಬುಕ್ ಖಾತೆಗಳಿಗೆ‌ ನಿಷೇಧ

0
323

ಸನ್ಮಾರ್ಗ ವಾರ್ತೆ

ಯಾಂಗೋನ್,ಫೆ.26: ಮ್ಯಾನ್ಮಾರ್‌ನಲ್ಲಿ ಸಂಘರ್ಷದ ವಾತಾವರಣವಿದ್ದು, ಈ ಹಿನ್ನೆಲೆಯ್ಲಿ ಮ್ಯಾನ್ಮಾರ್ ಸೇನೆಗೆ ಸಂಬಂಧಿಸಿದ ಖಾತೆಗಳನ್ನು ಫೇಸ್‍ಬುಕ್ ನಿಷೇಧಿಸಿದೆ. ಸೇನೆಯ ಅಧೀನದಲ್ಲಿರುವ ಕಂಪೆನಿಗಳು ಫೇಸ್‍ಬುಕ್‍ನಲ್ಲಿ ಜಾಹೀರಾತು ನೀಡುವುದನ್ನು ಕೂಡ ನಿಷೇಧ ವ್ಯಾಪ್ತಿಗೊಳಪಡಿಸಲಾಗಿದೆ.

ಇನ್ಸ್ಟಾಗ್ರಾಂ ಖಾತೆಗಳಿಗೂ ನಿಷೇಧವಿದ್ದು, ಈ ಹಿಂದೆ ಸೈನಿಕ ಮುಖ್ಯಸ್ಥರ ಪುಟಗಳನ್ನು ಫೇಸ್‍ಬುಕ್ ಅಮಾನತುಗೊಳಿಸಿತ್ತು. ಫೇಸ್‍ಬುಕ್‍ನ ತೀರ್ಮಾನದ ಬಗ್ಗೆ ಸೇನೆ ಪ್ರತಿಕ್ರಿಯೆ ನೀಡಿಲ್ಲ.

ನವೆಂಬರ್ ಎಂಟರ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಈ ತಿಂಗಳು ಒಂದನೇ ತಾರೀಕಿನಂದು ಮ್ಯಾನ್ಮಾರ್‌ನ ಪ್ರಜಾಪ್ರಭುತ್ವವಾದಿ ಸರಕಾರವನ್ನು ಸೇನೆ ಕೆಡವಿಹಾಕಿ ಅಧಿಕಾರವನ್ನು ತನ್ನ ಕೈಗೆತ್ತಿಕೊಂಡಿತ್ತು. ಅಂದಿನಿಂದ ಜನರು ಸೇನೆಯ ಈ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದು ಸೇನೆಯು ಈ ಯತ್ನಗಳನ್ನು ದಮನಿಸುತ್ತಿದೆ ಎಂದು ವರದಿಯಾಗಿವೆ.