ಫೇಸ್‍ಬುಕ್ ಪೋಸ್ಟ್: ಬಿಜೆಪಿ ಐಟಿ ಸೆಲ್ ಕಾರ್ಯದರ್ಶಿ ಬಂಧನ- ಕಾರಣ ಗೊತ್ತೇ?

0
243

ಗುವಾಹಟಿ, ಜೂ.14: ಸಾಮಾಜಿಕ ಮಾಧ್ಯಮಗಳಲ್ಲಿ ಕೋಮುವಾದಿ ಪೋಸ್ಟ್ ಹಾಕಿದ ಅಸ್ಸಾಂ ಬಿಜೆಪಿ ಐಟಿ ಸೆಲ್ ಸದಸ್ಯನನ್ನು ಅಸ್ಸಾಂ ಪೊಲೀಸರೇ ಬಂಧಿಸಿದ್ದಾರೆ. ಇದೇ ರೀತಿಯ ದೂರಿನಲ್ಲಿ ಬಿಜೆಪಿಯ ಇಬ್ಬರು ಬೆಂಬಲಿಗರನ್ನು ಕೂಡ ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆಗೆ ಗುರಿಪಡಿಸಿದ್ದಾರೆ. ಬಂಧಿತ ವ್ಯಕ್ತಿ ಬಿಜೆಪಿಯ ಸ್ಥಳೀಯ ಐಟಿ ಸೆಲ್ ಕಾರ್ಯದರ್ಶಿ ನೀತು ಬೊರಾ ಆಗಿದ್ದಾರೆ. ಅನ್ಯ ಧರ್ಮ ವಿಭಾಗವನ್ನು ಅವಹೇಳನ ಮಾಡಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದಾರೆ ಎಂದು ಅವರ ವಿರುದ್ಧ ದೂರು ನೀಡಲಾಗಿತ್ತು.

ಅದಿವಾಸಿ ವಿಭಾಗದ ಯುವತಿಯನ್ನು ಒಂದು ಧರ್ಮದ ವ್ಯಕ್ತಿ ಅತ್ಯಾಚಾರ ಮಾಡಿದ್ದಾನೆ ಎಂದು ಸುಳ್ಳು ಪೋಸ್ಟ್ ಹಾಕಿ ಪ್ರಚಾರ ನಡೆಸಿದ ಆರೋಪ ನೀತು ಬೊರಾ ವಿರುದ್ಧ ದಾಖಲಾಗಿದೆ.