ದ್ವೇಷಪೂರಿತ ಭಾಷಣಗಳಿವೆ: ಮೊದಲ ಬಾರಿಗೆ ಒಪ್ಪಿಕೊಂಡ ಫೇಸ್‌ಬುಕ್

0
163

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.21: ಫೇಸ್‍ಬುಕ್‍ನ ಒಳಗೆ ಪ್ರತಿ ಹತ್ತು ಸಾವಿರದಲ್ಲಿ 1೦-11 ಎಂಬ ರೀತಿಯಲ್ಲಿ ದ್ವೇಷಪೂರಿತ ಭಾಷಣಗಳಿವೆ ಎಂದು ಕಂಪೆನಿ ಅಧಿಕಾರಿಗಳು ತಿಳಿಸಿದಾರೆ. ಇದೇ ಮೊದಲಬಾರಿಗೆ ತಮ್ಮ ವೇದಿಕೆಯಲ್ಲಿ ದ್ವೇಷಪೂರಿತ ಭಾಷಣಗಳಿವೆ ಎಂದು ಫೇಸ್‍ಬುಕ್ ಒಪ್ಪಿಕೊಂಡಿದೆ.

ಈ ವರ್ಷದ ಮೂರನೆ ತ್ರೈಮಾಸಿಕದ ದತ್ತಾಂಶಗಳ ಪ್ರಕಾರ ಶೇ. 10ರಿಂದ ಶೇ.11ರವರೆಗೆ ವಿದ್ವೇಷದ ಭಾಷಣಗಳಿದ್ದವು ಎಂದು ಫೇಸ್‍ಬುಕ್ ಬಹಿರಂಗಪಡಿಸಿತು. ಬಳಕೆದಾರರು ತಿಳಿಸುವ ಮೊದಲೇ ಇಂತಹದನ್ನು ತೆರವುಗೊಳಿಸಲು ಸಾಧ್ಯವಾಗಿದೆ. ದಿನಾಲೂ 182 ಕೋಟಿ ಬಳಕೆದಾರರು ಫೇಸ್‍ಬುಕ್‍ಗೆ ಇದ್ದಾರೆ.

ಈ ವರ್ಷ ಜುಲೈಯಿಂದ ಸೆಪ್ಟಂಬರ್ ವರೆಗೆ 2.21 ಕೋಟಿ ದ್ವೇಷ ಭಾಷಣಗಳನ್ನು ತೆರವುಗೊಳಿಸಲಾಗಿದೆ. ಇದರಲ್ಲಿ ಶೇ.95ರಷ್ಟು ತಾವೆ ಗುರುತಿಸಿ ತೆಗೆದುಹಾಕಿದ್ದೇವೆ. ಇನ್‌ಸ್ಟಾಗ್ರಾಂನಿಂದ 65 ಲಕ್ಷದಷ್ಟು ತೆರವುಗೊಳಿಸಲಾಗಿದೆ.

ಜೊತೆಗೆ ಅಕ್ರಮ ಸಾರಾಂಶಗಳಿರುವ 1.92 ಕೋಟಿ ಗ್ರಾಫಿಕ್, 1.24 ಮಕ್ಕಳ ನಗ್ನ ಚಿತ್ರಗಳು, ಲೈಂಗಿಕ ಶೋಷಣೆಯ ಪೋಸ್ಟ್‌ಗಳನ್ನು ತೆಗೆದುಹಾಕಲಾಗಿದೆ ಎಂದು ಫೇಸ್‍ಬುಕ್ ತಿಳಿಸಿದೆ.

LEAVE A REPLY

Please enter your comment!
Please enter your name here