ಕೃಷಿ ಮಸೂದೆ| ಉದ್ಯಮಿಗಳು ಇನ್ನು ರೈತರ ಮನೆ ಬಾಗಿಲಿಗೆ ಬರಲಿದ್ದಾರೆ- ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್

0
536

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.24: ಕೃಷಿ ಮಸೂದೆ ಜಾರಿಯಾಗುವುದರೊಂದಿಗೆ ಉದ್ಯಮಿಗಳು ಮತ್ತು ರೈತರ ನಡುವೆ ಪರಸ್ಪರ ಅಂತರ ಕಡಿಮೆಯಾಗಲಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ರೈತರ ಮನೆ ಬಾಗಿಲಿಗೆ ವಸ್ತುಗಳನ್ನು ಖರೀದಿಸಲು ಉದ್ಯಮಿಗಳು ಬರಲಿದ್ದಾರೆ ಎಂದು ಅವರು ಹೇಳಿದರು.

ರೈತರಿಗೆ ಅವರ ಹಕ್ಕುಗಳ ಕುರಿತು ಅರಿವಿದೆ. ಪ್ರತಿಪಕ್ಷ ಹೇಳುವಂತೆ ವಿಷಯ ಇಲ್ಲ. ಮಸೂದೆಗೆ ಸಂಬಂಧಿಸಿದಂತೆ ರೈತರಿಗೆಲ್ಲ ಗೊತ್ತು. ಅವರ ಉತ್ಪನ್ನಗಳನ್ನು ಯಾರು ಖರೀದಿಸುತ್ತಾರೆಂದೂ ಅವರಿಗೆ ತಿಳಿದಿದೆ. ಉದ್ಯಮಿಗಳು ರೈತರ ಮನೆ ಬಾಗಿಲಿಗೆ ಬಂದು ವಸ್ತುಗಳನ್ನು ಖರೀದಿಸಲು ನಿರ್ಬಂಧಿತರಾಗುವ ಸ್ಥಿತಿಯಿದು ಎಂದು ತೋಮರ್ ಹೇಳಿದರು.

ಗ್ರಾಮೀಣ ರೈತರು ಅವರ ಉತ್ಪನ್ನಗಳನ್ನು ಒಂದು ಸ್ಥಳದಲ್ಲಿ ಇರಿಸುತ್ತಾರೆ. ಇಲ್ಲಿಗೆ ಉದ್ಯಮಿಗಳು ನೇರವಾಗಿ ಬಂದು ಉತ್ಪನ್ನಗಳನ್ನು ಆಯ್ಕೆ ಮಾಡುತ್ತಾರೆ. ಅವರಿಗೆ ಬೇಕಾದ ಉತ್ಪನ್ನಗಳ ಬೆಲೆಯನ್ನು ಇಬ್ಬರೂ ಚರ್ಚಿಸಿ ತೀರ್ಮಾನಿಸಬಹುದು. ವಸ್ತುಗಳು ಸಾಗಾಟ ವೆಚ್ಚವಿಲ್ಲದೆ ರೈತರಿಗೆ ಮಾರಲು ಆಗುತ್ತದೆ. ರೈತರ ಉತ್ಪನ್ನಗಳನ್ನು ಮಾರಲು ಎಲ್ಲಿಗೂ ಹೋಗಬೇಕಾಗಿಲ್ಲ ಎಂದು ತೋಮರ್ ಹೇಳಿದರು. ಪ್ರತಿಪಕ್ಷಗಳ ಭಾರೀ ಪ್ರತಿಭಟನೆಯನ್ನು ಕಡೆಗಣಿಸಿ ಬಿಜೆಪಿ ಸರಕಾರ ಕೃಷಿ ಮಸೂದೆಯನ್ನು ಜಾರಿಗೊಳಿಸಿದೆ.