ರೈತರು ಒಪ್ಪದಿದ್ದರೂ ಕೇಂದ್ರ ಸರಕಾರದಿಂದ ಕಾನೂನು ತಿದ್ದುಪಡಿ ಸಾಧ್ಯತೆ

0
389

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಎಂಟನೆಯ ಸುತ್ತಿನ ಚರ್ಚೆಯಲ್ಲಿ ರೈತರು ಒಪ್ಪಿಕೊಳ್ಳುವುದಿಲ್ಲ ಎಂಬುದನ್ನು ಅರಿತ ಕೇಂದ್ರ ಸರಕಾರ ಸುಪ್ರೀಮ್ ಕೋರ್ಟಿನ ಮೊರೆ ಹೋಗಿದೆ. ರೈತರು ಒಪ್ಪದಿದ್ದರೂ ಸ್ವ-ನೆಲೆಯಲ್ಲಿ ಕಾನೂನಿಗೆ ತಿದ್ದುಪಡಿತರಲಿದೆ ಎಂದು ಮೂಲಗಳು ತಿಳಿಸಿವೆ. ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಅದು ಮಧ್ಯಪ್ರವೇಶಿಸಿಲ್ಲ. ಜನವರಿ 15ರ ಚರ್ಚೆಯ ಬಳಿಕ ಕಾನೂನು ತಿದ್ದುಪಡಿ ಮಾಡಲು ಸರಕಾರ ನಿರ್ಧರಿಸಿದೆ ಎಂದು ಸರಕಾರಿ ಮೂಲದಿಂದ ಸೂಚನೆ ಲಭ್ಯವಾಗಿದೆ.

ಕೃಷಿ ಕಾನೂನು ಹಿಂಪಡೆದುಕೊಳ್ಳದೆ ಮನೆಗೆ ಹೋಗುವುದಿಲ್ಲ ಎಂದು ಲಕ್ಷಾಂತರ ರೈತರು ದಿಲ್ಲಿಯ ನಾಲ್ಕು ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರನ್ನು ತೆರವುಗೊಳಿಸಬೇಕೆಂದು ಸರ್ಕಾರವು ಸಲ್ಲಿಸಿದ ಅರ್ಜಿಯನ್ನು ಇಂದು ನ್ಯಾಯಾಲಯವು ವಿಚಾರಣೆಗೆತ್ತಿಕೊಳ್ಳಲಿದೆ. ಪ್ರತಿಭಟನೆಯನ್ನು ರಾಜಿಯಲ್ಲಿ ಮುಗಿಸಲು ಒಂದು ಸಮಿತಿಯನ್ನು ರೂಪಿಸಬೇಕೆಂದು ಚೀಫ್ ಜಸ್ಟಿಸ್ ಎಸ್‍ಎ ಬೊಬ್ಡೆ ನೇತೃತ್ವದ ಸುಪ್ರೀಂಕೋರ್ಟು ಪೀಠ ಹಿಂದಿನ ವಿಚಾರಣೆಯ ವೇಳೆ ಹೇಳಿತ್ತು. ಆದರೆ ಚಳಿಗಾಳದ ರಜೆಯ ನಂತರ ಸುಪ್ರೀಂಕೋರ್ಟು ಕಲಾಪ ಆರಂಭಿಸಿದಾಗ ಈ ಕುರಿತು ಮೌನವಹಿಸಿದೆ.