ದಿಲ್ಲಿ ಗಡಿ ರೈತರಿಂದ ತುಂಬಿತು: ಇಂದು ರೈತರೊಂದಿಗೆ ಕೇಂದ್ರದ ಎಂಟನೆ ಚರ್ಚೆ

0
379

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೇಂದ್ರ ಸರಕಾರದೊಂದಿಗಿನ ರೈತರ ಎಂಟನೆ ಬಾರಿಯ ಚರ್ಚೆಯು ಇಂದು ನಡೆಯಲಿದ್ದು ರೈತರು ಹೊಸ ಮೂರು ಕೃಷಿ ಕಾನೂನು ರದ್ದು ಪಡಿಸಬೇಕೆಂದು ಆಗ್ರಹಿಸಿ ದಿಲ್ಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ರೈತರೊಂದಿಗೆ ಚರ್ಚೆ ನಡೆಯಲಿದೆ.

ಕೃಷಿ ಕಾನೂನುಗಳು ಹಿಂಪಡೆಯಬೇಕೆಂದು ರೈತರು ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ. ಕೇಂದ್ರ ಸರಕಾರ ಅದಕ್ಕೆ ಸಿದ್ಧವಿಲ್ಲ. ಜನವರಿ ನಾಲ್ಕರಂದು ಚರ್ಚೆ ನಡೆದಿತ್ತಲ್ಲದೇ, ಅದು ವಿಫಲವೂ ಆಗಿತ್ತು. ಬೇಡಿಕೆಗಳನ್ನು ಒಪ್ಪಿಕೊಳ್ಳದಿದ್ದರೆ ಗಣರಾಜ್ಯೋತ್ಸವದಂದು ದೇಶದ ರಾಜಧಾನಿ ದಿಲ್ಲಿಯಲ್ಲಿ ಟ್ರಾಕ್ಟರ್ ರ್ಯಾಲಿ ನಡೆಸುತ್ತೇವೆಂದು ರೈತರು ಮುನ್ನೆಚ್ಚರಿಕೆ ನೀಡಿದ್ದಾರೆ. ಜನುವರಿ 26ಕ್ಕೆ ಟ್ರಾಕ್ಟರ್ ರ್ಯಾಲಿಗಾಗಿ ರಿಹರ್ಸಲ್ ಕೂಡ ನಿನ್ನೆ ನಡೆಸಲಾಗಿದೆ.

ರೈತರ ಹೋರಾಟಕ್ಕೆ 44 ದಿನಗಳು ಕಳೆದಿವೆ. ದಿಲ್ಲಿ ಗಡಿಯಲ್ಲೆಲ್ಲ ರೈತರು ತುಂಬಿಕೊಂಡಿದ್ದು ಗಡಿ ಮುಚ್ಚಿದ ಸ್ಥಿತಿಯಲ್ಲಿದೆ. ಹರಿಯಾಣ, ಉತ್ತರ ಪ್ರದೇಶಗಳ ರಸ್ತೆಗಳು ಬಂದ್ ಆಗಿವೆ.