ನಿರಂತರ ಅತ್ತ 4 ವರ್ಷದ ಬಾಲಕಿ: ಕೋಪೋದ್ರಿಕ್ತ ತಂದೆಯಿಂದ ಕೊಲೆ

0
435

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.31: ನಾಲ್ಕು ವರ್ಷದ ಹೆಣ್ಣುಮಗು ನಿರಂತರ ಅಳುತ್ತಿದ್ದದ್ದಕ್ಕಾಗಿ ಕೋಪಗೊಂಡ ತಂದೆ ಮಗುವನ್ನೇ ಕೊಲೆ ಮಾಡಿದ್ದಾನೆ. ವಸುದೇವ ಗುಪ್ತ ಮಗಳನ್ನು ಕೊಲೆ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಮಗುವಿನ ಮೃತದೇಹದೊಂದಿಗೆ ಆಟೋರಿಕ್ಷಾದಲ್ಲಿ ಸುತ್ತಾಡುತ್ತಿದ್ದ ವಸುದೇವ ನೊಯಿಡದಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ಸುಲ್ತಾನ್ಪುರ್ ನಿವಾಸಿಯಾದ ವಸುದೇವ ಗುಪ್ತ ಪತ್ನಿ ಮಕ್ಕಳೊಂದಿಗೆ ಕೆಲವು ವರ್ಷಗಳಿಂದ ಕೋದ ಕಾಲನಿಯಲ್ಲಿ ವಾಸಿಸುತ್ತಿದ್ದ.

ಆಟೋ ಚಾಲಕನದ ಈತನ ಪತ್ನಿ 20 ದಿನಗಳ ಹಿಂದೆ ಮನೆಬಿಟ್ಟು ಹೋಗಿದ್ದಳು. ಇದು ಈತನನ್ನು ಮಾನಸಿಕವಾಗಿ ಬಳಲುವಂತೆ ಮಾಡಿತ್ತು. ಇದೇ ವೇಳೆ ನಾಲ್ಕು ವರ್ಷದ ಮಗಳು ನಿರಂತರ ಅಳುತ್ತಿದ್ದುದಕ್ಕೆ ಈತ ಉದ್ವಿಗ್ನಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಒಂದು ಸ್ಪಾದಲ್ಲಿ ಈತನ ಪತ್ನಿ ಕೆಲಸ ಮಾಡುತ್ತಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಮಗು ಅಳು ನಿಲ್ಲಿಸಲಿಲ್ಲ. ಈತನ ಕೋಪ ನೆತ್ತಿಗೇರಿತು. ಮಗುವನ್ನು ಕೊಲೆ ಮಾಡಿ ಮೃತದೇಹವನ್ನು ಟವೆಲ್‍ನಲ್ಲಿ ಸುತ್ತಿ ಪತ್ನಿಯನ್ನು ಹುಡುಕುತ್ತಾ ಹೊರಟಿದ್ದ. ಈತನ ಸಹೋದರ ಮನೆಗೆ ಬಂದು ನೋಡಿದಾಗ ಮನೆ ತೆರೆದಿತ್ತು. ಗುಪ್ತಾನಿಗೆ ಫೋನ್ ಮಾಡಿದಾಗ ಮಗುವಿನ ಕೊಲೆಯ ವಿವರ ಬಹಿರಂಗವಾಗಿತ್ತು.