ಸನ್ಮಾರ್ಗ ವಾರ್ತೆ
ವಾಷಿಂಗ್ಟನ್,ಜ.18: ನಿಯೋಜಿತ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರಮಾಣವಚನ ಕಾರ್ಯಕ್ರಮಕ್ಕೆ ದಾಳಿ ನಡೆಯಬಹುದು ಎಂದು ಅಮೆರಿಕ ಆಂತರಿಕ ಸುರಕ್ಷಾ ಏಜೆನ್ಸಿ ಎಫ್ಬಿಐ ಮುನ್ನೆಚ್ಚರಿಕೆ ನೀಡಿದೆ. 50 ರಾಜ್ಯಗಳ ಕೇಂದ್ರದಲ್ಲಿ ಸುರಕ್ಷೆ ಬಿಗಿಗೊಳಿಸಬೇಕೆಂದು ಎಫ್ಬಿಐ ತಿಳಿಸಿದ್ದು ವಾಷಿಂಗ್ಟನ್,ಮಿಶಿಗನ್, ವರ್ಜೇನಿಯ, ವ್ಯಾಕ್ಸಿನ್, ಪೆನ್ಸಿಲ್ವೇನಿಯ ಮುಂತಾದಡೆ ಅಕ್ರಮ ಘಟನೆಗಳು ನಡೆಯುವ ಸಾಧ್ಯತೆ ಹೆಚ್ಚಿದೆ ಎಂದಿದೆ.
ಜನವರಿ 20ಕ್ಕೆ ಬೈಡನ್ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು ಕ್ಯಾಪಿಟಲ್ ಹಿಲ್ ದಾಳಿಗೆ ಸಮಾನವಾದ ದಾಳಿ ಅಂದು ನಡೆಯಬಹುದು ಎಂದು ಈಗಾಗಲೇ ವಿವಿಧ ಫೆಡರಲ್ ಏಜೆನ್ಸಿಗಳು ಮುನ್ನೆಚ್ಚರಿಕೆ ನೀಡಿದ್ದು ಪದಗ್ರಹಣ ದಿನ ವಾಷ್ಟಿಂಗ್ಟನ್ನಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ದೇಶದ ಫೆಡರಲ್ ಏಜೆನ್ಸಿಗಳಿಗೆ ವಿಶೇಷ ಸುರಕ್ಷೆಯ ಸೂಚನೆಗಳನ್ನೂ ಈಗಾಗಲೇ ನೀಡಲಾಗಿದೆ.