ನೇತ್ರಾವತಿ ಸೇತುವೆ ತಂತಿ ಬೇಲಿ ನಿರ್ಮಾಣಕ್ಕೆ ಚಾಲನೆ

0
936

ಸನ್ಮಾರ್ಗ ವಾರ್ತೆ

ಮಂಗಳೂರು,ಜು.4: ನೇತ್ರಾವತಿ ಸೇತುವೆಯ ಮೇಲೆ ಇಕ್ಕೆಲಗಳಲ್ಲಿ ತಂತಿ ಬೇಲಿ ನಿರ್ಮಾಣ ಕಾಮಗಾರಿಗೆ ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್‌ರವರು ಶನಿವಾರ ಚಾಲನೆ ನೀಡಿದರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಫೆನ್ಸಿಂಗ್‌ಗಾಗಿ 50 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ವೇದವ್ಯಾಸ ಕಾಮತ್‌ರವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಉಳ್ಳಾಲ ನೇತ್ರಾವತಿಯ ಸೇತುವೆಯಲ್ಲಿ ಕಾಫಿ ಡೇ ಯ ಮಾಲಕ ಸಿದ್ಧಾರ್ಥ್‌ರವರ ಆತ್ಮಹತ್ಯೆಯ ಬಳಿಕ ದಿನ ನಿತ್ಯವು ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿತ್ತಲ್ಲದೇ, ಸೂಸೈಡ್ ಸ್ಪಾಟ್ ಆಗಿ ಕರೆಯಲಾಗುತ್ತಿತ್ತು. ಇದು ಪೊಲೀಸ್ ಇಲಾಖೆಗೆ ತಲೆನೋವು ಕೂಡ ಆಗಿತ್ತಲ್ಲದೇ, ಸಾರ್ವಜನಿಕರ ಸಂಚಾರಕ್ಕೂ ತಡೆಯಾಗುತ್ತಿತ್ತು ಈ ಎಲ್ಲಾ ಘಟನೆಗಳ ಹಿನ್ನೆಲೆಯಲ್ಲಿ ನೇತ್ರಾವತಿ ಸೇತುವೆಗೆ ಫೆನ್ಸಿಂಗ್ ವ್ಯವಸ್ಥೆ (ಬೇಲಿ ವ್ಯವಸ್ಥೆ) ಕಲ್ಲಿಸಬೇಕೆಂಬ ಬೇಡಿಕೆಯು ಬಹಳ ಹಿಂದೆಯೇ ಕೇಳಿ ಬಂದಿತ್ತು.

ಅಲ್ಲದೇ,ಇಂದು ಬೆಳಿಗ್ಗೆಯೂ ಕೂಡ ಮಧ್ಯ ವಯಸ್ಕನೋರ್ವ ಸೇತುವೆಯಿಂದ  ನದಿಗೆ ಹಾರಿದ ಬಗ್ಗೆ ಸನ್ಮಾರ್ಗವು ಫೇಸ್‌ಬುಕ್ ಲೈವ್ ಮೂಲಕ ವರದಿ ಮಾಡಿ ಜನಪ್ರತಿನಿಧಿಗಳು ಶೀಘ್ರವಾಗಿ ಸ್ಪಂದಿಸುವಂತೆ ಆಗ್ರಹಿಸಿತ್ತು.

ವರದಿ: ಇರ್ಷಾದ್ ವೇಣೂರ್

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.