ಅಜ್ಮಾನ್: ಮಾರುಕಟ್ಟೆಯಲ್ಲಿ ಭಾರೀ ಬೆಂಕಿ ಅವಘಡ

0
806

ಸನ್ಮಾರ್ಗ ವಾರ್ತೆ

ಯುಎಇ, ಆ.5: ಬುಧವಾರ ಸಂಜೆ 6.30 ರ ಸುಮಾರಿಗೆ ಅಜ್ಮಾನ್‌ನ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡು ಅವಘಡ ಸಂಭವಿಸಿದೆ.

ಎಮಿರೇಟ್‌ನ ಹೊಸ ಕೈಗಾರಿಕಾ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯನ್ನು ನಂದಿಸಲು ಹಲವಾರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ನುಗ್ಗುತ್ತಿರುವ ದೃಶ್ಯ ಕಂಡು ಬಂದಿದೆ.

ಅಜ್ಮಾನ್ ನ ಸಾರ್ವಜನಿಕರಿಗೆ ಪರ್ಯಾಯ ಮಾರ್ಗಗಳನ್ನು ತೆಗೆದುಕೊಳ್ಳುವಂತೆ ಸಿವಿಲ್ ಡಿಫೆನ್ಸ್ ನ ಅಧಿಕಾರಿಗಳು ಒತ್ತಾಯಿಸಿದ್ದಾರೆ.

“ಅಜ್ಮಾನ್ ಅಗ್ನಿಶಾಮಕ ದಳದವರು ಸೈಟ್ ಅನ್ನು ಸುತ್ತುವರೆದಿದ್ದಾರೆ ಮತ್ತು ಅದರಲ್ಲಿ ಅನೇಕ ಅಂಗಡಿಗಳಲ್ಲಿ ಭುಗಿಲೆದ್ದಿರುವ ಬೆಂಕಿಯನ್ನು ನಂದಿಸಲು ನೀರು ಮತ್ತು ಫೋಮ್ ಅನ್ನು ಬಳಸುತ್ತಿದ್ದಾರೆ” ಎಂದು ಮೂಲಗಳು ಖಲೀಜ್ ಟೈಮ್ಸ್‌ಗೆ ತಿಳಿಸಿರುವುದಾಗಿ ವರದಿ ಮಾಡಿದೆ.

“ದೊಡ್ಡ ಯಾತನೆಯ ವಿರುದ್ಧ ಹೋರಾಡಲು ನಾಲ್ಕು ನಾಗರಿಕ ರಕ್ಷಣಾ ಕೇಂದ್ರಗಳು ತೊಡಗಿಕೊಂಡಿವೆ” ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಲೆಬನಾನ್ ನ ಬೈರೂತ್ ನಲ್ಲಿ ನಿನ್ನೆ ನಡೆದ ಭೀಕರ ಸ್ಫೋಟದ ಬಳಿಕ ಇಂದು ಅಜ್ಮಾನ್ ನಲ್ಲಿ ನಡೆದಿರುವ ಘಟನೆಯು ಜಗತ್ತಿನಾದ್ಯಂತ ಜನರಿಗೆ ಶಾಕ್ ಉಂಟು ಮಾಡಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.