ಕ್ಯಾಪಿಟಲ್ ದಾಳಿಯಿಂದ ಬೇಸರವಾಗಿದೆ- ಮೆಲಾನಿಯ ಟ್ರಂಪ್

0
130

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಕ್ಯಾಪಿಟಲ್‍ಗೆ ಟ್ರಂಪ್ ಬೆಂಬಲಿಗರು ನಡೆಸಿರುವ ಆಕ್ರಮಣದ ಕುರಿತು ಟ್ರಂಪ್ ಪತ್ನಿ ಮೆಲಾನಿಯ ಪ್ರತಿಕ್ರಿಯೆ ನೀಡಿದ್ದಾರೆ. ದಾಳಿ ನಡೆದು ಐದು ದಿವಸದ ಬಳಿಕ ಸೋಮವಾರ ಮೆಲಾನಿಯ ಈ ವಿಷಯದಲ್ಲಿ ಮಾತಾಡಿದರು.

ಕಳೆದ ವಾರ ಘಟಿಸಿದ ಘಟನೆ ನನ್ನಲ್ಲಿ ಬೇಸರವನ್ನುಂಟು ಮಾಡಿದೆ. ನನಗೆ ಜಿಗುಪ್ಸೆಯಾಗಿದೆ. ನಮ್ಮ ದೇಶ ಸಾಂಸ್ಕೃತಿಕವಾಗಿ ಸಂತೋಷದಲ್ಲಿರಬೇಕು. ಅದರಲ್ಲಿ ತಪ್ಪಿದರೆ ಏನೂ ಸಿಗುವುದಿಲ್ಲ. ಕ್ಯಾಪಿಟಲ್‍ಗೆ ನಡೆದ ದಾಳಿಯ ಘಟನೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅಕ್ರಮವನ್ನು ಯಾವ ರೀತಿಯಲ್ಲಿಯೂ ಒಪ್ಪಲು ಸಾಧ್ಯವಿಲ್ಲ. ಎಂದು ವೈಟ್‍ಹೌಸ್ ಹೊರಡಿಸಿದ ಮೆಲಾನಿಯರ ಹೇಳಿಕೆಯಲ್ಲಿದೆ.

ದಾಳಿಯಲ್ಲಿ ಮೃತರಾದವರ ಕುಟುಂಬದ ದುಃಖದಲ್ಲಿ ತಾನೂ ಭಾಗಿ. ಈ ನಷ್ಟ ಸಹಿಸಲು ಅವರಿಗೆ ಶಕ್ತಿ ಸಿಗಲಿ ಎಂದು 600 ಪದಗಳ ಹೇಳಿಕೆಯಲ್ಲಿ ಮೆಲಾನಿಯ ಹೇಳಿದ್ದಾರೆ.