ಫೆಡರೇಶನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(FITU) ನೂತನ ರಾಜ್ಯಾಧ್ಯಕ್ಷರಾಗಿ ಸುಲೈಮಾನ್ ಕಲ್ಲರ್ಪೆ ಆಯ್ಕೆ

0
334

ಸನ್ಮಾರ್ಗ ವಾರ್ತೆ

ಬೆಂಗಳೂರು:ಫೆಡರೇಶನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(FITU) ಇದರ ನೂತನ ರಾಜ್ಯಾಧ್ಯಕ್ಷರಾಗಿ ಶ್ರೀಮಾನ್ ಸುಲೈಮಾನ್ ಕಲ್ಲರ್ಪೆ ಆಯ್ಕೆಯಾದರು. ಬೆಂಗಳೂರಿನ ವೆಲ್ಫೇರ್ ಭವನದಲ್ಲಿ FITU ರಾಷ್ಟ್ರಾದ್ಯಕ್ಷರಾದ ಶ್ರೀಮಾನ್ ಸುಬ್ರಮಣಿ ಆರ್ಮುಗಂ ರವರ ನೇತೃತ್ವದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.

ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮಾನ್ ರಾಜಾ ನಾಯಕ್, ಕಾರ್ಯದರ್ಶಿಯಾಗಿ ದಿವಾಕರ್ ರಾವ್ ಮತ್ತು ಕೋಶಾಧಿಕಾರಿಯಾಗಿ ಅಬ್ದುಲ್ ರೆಹಮಾನ್ ಬೆಂಗಳೂರು ಆಯ್ಕೆಯಾಗಿದ್ದಾರೆ. ಮಾದ್ಯಮ ಕಾರ್ಯದರ್ಶಿಯಾಗಿ ಅಝೀಝ್ ಜಾಗಿರ್ದಾರ್ ರಾಯಚೂರು ಅಲ್ಲದೆ 12 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

2014ರಲ್ಲಿ ಆರಂಭವಾದ FITU, ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ ನಿಲುವಿನ ವಿರುದ್ಧ ನಿರಂತರ ಹೋರಾಟ ನಡೆಸುತ್ತಾ ಬಂದಿದೆ. ಅದೇ ರೀತಿ ನವಂಬರ್ 26 ರಂದು ನಡೆಯುವ ಅಖಿಲ ಭಾರತ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂಬುದಾಗಿ ನೂತನ ರಾಜ್ಯಾಧ್ಯಕ್ಷರು ಹೇಳಿದ್ದಾರೆ.