ಪ್ರವಾಹ ಪೀಡಿತರ ಸೇವಾ ಕಾರ್ಯದಲ್ಲಿ ಸದ್ದಿಲ್ಲದೇ ತೊಡಗಿಸಿಕೊಂಡಿರುವ HRS ಕಾರ್ಯಕರ್ತರು: ಇನ್ನೂ ಮುಗಿದಿಲ್ಲ ಪೀಡಿತರ ಸಂಕಟ- ವೀಡಿಯೊ

0
1014

ಸನ್ಮಾರ್ಗ ವಾರ್ತೆ-

ಕೊಡಗು:ಆ. ೧೬, ಪ್ರವಾಹ ಪೀಡಿತವಾಗಿರುವ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ನ ಕಾರ್ಯಕರ್ತರು ಪರಿಹಾರ ಕಾರ್ಯಗಳಲ್ಲಿ ಸದ್ದಿಲ್ಲದೇ ತೊಡಗಿಸಿಕೊಂಡು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಕಾರ್ಯಾಚರಿಸಲಿಕ್ಕೆಂದೇ ರೂಪಿತವಾಗಿರುವ ಹುಮಾನಿಟೇರಿಯನ್ ರಿಲೀಫ್ ಸೊಸೈಟಿ (HRS) ಎಂಬ ತನ್ನ ಪೂರ್ಣ ತರಬೇತಿ ಹೊಂದಿದ ಜಮಾಅತ್ ನ ಸೇವಾ ದಳವು ರಾಜ್ಯದ ಉದ್ದಕ್ಕೂ ಸೇವಾ ಕಾರ್ಯಗಳಲ್ಲಿ ನಿರತವಾಗಿ ತನ್ನ ಅಳಿಲ ಸೇವೆಯನ್ನು ಸಲ್ಲಿಸುತ್ತಿದೆ.

ಅತೀ ಹೆಚ್ಚು ನಾಶ ನಷ್ಟಕ್ಕೆ ಒಳಗಾದ ಕೊಡಗಿನಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿರುವ HRS ತಂಡವು ಪೀಡಿತರ ಸೇವೆಯಲ್ಲಿ ಈಗಲೂ ನಿರತವಾಗಿದೆ. ಅಲ್ಲಿ ಶುಚಿತ್ವದಿಂದ ತೊಡಗಿ ಮನೆ ರಿಪೇರಿಯವರೆಗೆ ಮತ್ತು ತೆಪ್ಪದಲ್ಲಿ ತೆರಳಿ ಮನೆ ಸರ್ವೇ ನಡೆಸುವವರೆಗೆ ಮತ್ತು ಬಟ್ಟೆ, ಬರೆ, ಆಹಾರ ಪದಾರ್ಥಗಳನ್ನು ವಿತರಿಸುವವರೆಗೆ ಸಂಪೂರ್ಣವಾಗಿ HRS ತೊಡಗಿಸಿಕೊಂಡಿದೆ. ಸಿದ್ಧಾಪುರದ ನೆಲ್ಯೆಹುದಿಕೇರಿ ಭಾಗದ ಕುಂಬಾರಗುಂಡಿ, ಕರಡಿ ಗೋಡು ಪ್ರದೇಶಗಳ ಮನೆಗಳನ್ನು ಶುಚಿಗೊಳಿಸಲಾಗಿದೆ. ಹಾಗೆಯೇ

JIH team carried out boat survey in flood affected areas of Kodagu District

Posted by Thouseef Madikeri on Tuesday, August 13, 2019

ಬೆಳಗಾವಿಯಲ್ಲೂ ಪೀಡಿತರ ನೆರವಿಗೆ HRS ತಂಡವು ಧಾವಿಸಿದ್ದು, ಅಲ್ಲೂ ಸೇವಾ ಕಾರ್ಯದಲ್ಲಿ ನಿರತವಾಗಿದೆ. ಇಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರಿಗೆ ವೈದ್ಯಕೀಯ ಶಿಬಿರ ನಡೆಸಲಾಯಿತು ಹಾಗೂ ಸಂತ್ರಸ್ತರಿಗೆ ಬೆಡ್ ಶೀಟುಗಳು, ಬ್ಲಾ೦ಕೇಟ್ ಹಾಗೂ ಅಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ರಾಜ್ಯದ ಇತರ ಭಾಗಗಳಿಂದಲೂ ಸೇವಾ ಕಾರ್ಯದ ವರದಿಗಳು ಬರುತ್ತಿದ್ದು, ಸದ್ಯ ಲಭ್ಯವಿರುವ ಮಾಹಿತಿಯನ್ನುಇಲ್ಲಿ ಹಂಚಿಕೊಳ್ಳಲಾಗಿದೆ. ಜಮಾಅತ್ ನ ವತಿಯಿಂದ ಶುಕ್ರವಾರ ಮತ್ತು ಈದ್ ನ ದಿನಗಳಲ್ಲಿ ನೆರೆ ಪೀಡಿತರಿಗಾಗಿ ಹಣ ಸಂಗ್ರವೂ ಆಗಿದ್ದು ,ಅವನ್ನು ಪೀಡಿತರಿಗೆ ತಲುಪಿಸುವ ಕೆಲಸಗಳೂ ಆಗುತ್ತಿವೆ.