ಉಯಿಘುರ್ ಮುಸ್ಲಿಮರ ಮೇಲೆ ಬಲಪ್ರಯೋಗ: ಚೀನಾ ಉತ್ಪನ್ನಗಳಿಗೆ ನಿಷೇಧ ಹೇರಿದ ಅಮೆರಿಕ

0
424

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಸೆ.16: ಚೀನದ ಉತ್ಪನ್ನಗಳನ್ನು ಆಮದಿನ ಮೇಲೆ ಅಮೆರಿಕ ನಿಷೇಧ ಹೇರಿದೆ. ಕಂಪ್ಯೂಟರ್ ಬಿಡಿ ಭಾಗಗಳು, ಹತ್ತಿ, ಉಡುಪು, ಕೇಶ ಸಂರಕ್ಷಕ ಉತ್ಪನ್ನಗಳು ಇತ್ಯಾದಿ ನಿಷೇಧದಲ್ಲಿ ಸೇರಿವೆ. ಮುಸ್ಲಿಮ್ ಬಹುಸಂಖ್ಯಾತ ಪ್ರದೇಶವಾದ ಶಿಂಜಿಯಾಂಗ್ ಪ್ರಾಂತದಲ್ಲಿ ಬಲವಂತದಿಂದ ಉಯಿಗುರ್ ಮುಸ್ಲಿಮರನ್ನು ಲೇಬರ್ ಕ್ಯಾಂಪಿನಲ್ಲಿರಿಸಿ ಚೀನ ಇವುಗಳನ್ನು ಉತ್ಪಾದಿಸುತ್ತಿವೆ ಎಂಬುದಾಗಿ ಆರೋಪಿಸಲಾಗಿದ್ದು, ಆದುದರಿಂದ ಅಮೆರಿಕ ಈ ಉತ್ಪನ್ನಗಳಿಗೆ ನಿಷೇಧ ಹೇರಿದೆ.

ಕೊರೋನ ವ್ಯಾಪನದ ನಂತರ ಅಮೆರಿಕ-ಚೀನ ಸಂಬಂಧ ಕದಡಿತ್ತು. ವಿಶ್ವಾದ್ಯಂತ ಕೊರೋನ ಹರಡಲು ಚೀನ ಕಾರಣವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದರು. ಶಿಂಜಿಯಾಂಗ್ ಪ್ರಾಂತ್ಯದ ಮಾನವಹಕ್ಕು ಉಲ್ಲಂಘನೆ, ಹಾಂಕಾಂಗಿನ ಸ್ವಯಮಾಡಳಿತಕ್ಕೆ ಕುತ್ತು. ಟಿಬೆಟ್ ಸಮಸ್ಯೆ, ತಂತ್ರಜ್ಞಾನ ಕಳ್ಳತನ ಮುಂತಾದ ಆರೋಪಗಳಿಂದ ಉಭಯ ದೇಶಗಳ ಸಂಬಂಧ ಕೆಟ್ಟು ಹೋಗಿದೆ.

ಶಿಂಜಿಯಾಂಗ್ ಉಯಿಘುರ್ ಪ್ರದೇಶದಲ್ಲಿ ಚೀನದ ಸರಕಾರಿ ಕಂಪೆನಿಗಳು, ಸಂಘಟನೆಗಳು ಕಾರ್ಮಿಕರನ್ನು ಬಲವಂತಪಡಿಸಿ ಕೆಲಸ ಮಾಡಿಸಿ ಇದನ್ನು ಉತ್ಪಾದಿಸುತ್ತಿದ್ದಾರೆ. ಚೀನ ಸರಕಾರ ಈ ವಿಭಾಗಗಳ ಮಾನವಹಕ್ಕು ಉಲ್ಲಂಘಿಸುತ್ತಿದೆ ಎಂದು ಉತ್ಪನ್ನಗಳಿಗೆ ನಿಷೇಧ ಹೇರಿದ ಬಳಿಕ ಅಮೆರಿಕದ ಡಿಪಾರ್ಟ್‍ಮೆಂಟ್ ಆಫ್ ಹೋಂಲ್ಯಾಂಡ್ ಸೆಕ್ಯೂರಿಟಿ ತಿಳಿಸಿದೆ.

ಚೀನದ ಸರಕಾರ ಶಿಂಜಿಯಾಂಗ್ ಪ್ರದೇಶದ ಉಯಿಘುರ್ ಮುಸ್ಲಿಮರಿಗೆ ಹಿಂಸೆ ನೀಡುತ್ತಿದೆ. ಮಾನವಹಕ್ಕು ಉಲ್ಲಂಘನೆ ನಡೆಸುತ್ತದೆ ಎಂದು ಆರೋಪಿಸಿ 28 ಸಂಘಟನೆಗಳನ್ನೂ ಕಂಪೆನಿಗಳನ್ನೂ ಅಮೆರಿಕ ಈ ಹಿಂದೆ ಕಪ್ಪು ಪಟ್ಟಿಗೆ ಸೇರಿಸಿತ್ತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.