89ರ ಹರೆಯದ ಫಾರ್ಮುಲ1 ಮಾಜಿ ಮುಖ್ಯಸ್ಥನಿಗೆ ಗಂಡು ಮಗು

0
883

ಸನ್ಮಾರ್ಗ ವಾರ್ತೆ

ಲಂಡನ್,ಜು.4: ಫಾರ್ಮೂಲಾ 1 ರೇಸ್ ಮಾಜಿ ಮುಖ್ಯಸ್ಥ ಕೋಟ್ಯಧಿಪತಿ ಬೆನ್ನಿ ಎಕ್ಸಿಸ್ಟನ್‍ರಿಗೆ ಅವರ 89ನೆ ವಯಸ್ಸಿನಲ್ಲಿ ಮಗು ಜನಿಸಿದೆ. ಅವರ ಮೂರನೇ ಪತ್ನಿ ಫಾಬಿಯಾನ್ ಫ್ಲೇಸಿ(43) ಕಳೆದ ದಿವಸ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಬೆನ್ನಿಯ ಮೊದಲ ಗಂಡು ಮಗು ಫಾಬಿಯಾನ್‌ರಲ್ಲಿ ಹುಟ್ಟಿದ ಮೊದಲ ಮಗು ಇದು. ಏಯ್ಸ್ ಎಂದು ಹೆಸರಿಸಿದ್ದೇವೆ ಎಂದು ಬೆನ್ನಿಯ ವಕ್ತಾರ ತಿಳಿಸಿದರು. 2012ರಲ್ಲಿ ಬೆನ್ನಿ ಫಾಬಿಯಾನಾರನ್ನು ಮದುವೆಯಾಗಿದ್ದರು.

ಬೆನ್ನಿಯ ಮೊದಲ ಎರಡು ಮದುವೆಯಲ್ಲಿ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಮೊದಲ ಪತ್ನಿ ಇವಿ ಬಮಫರ್ಡಿಗೆ ಜನಿಸಿದ ಹಿರಿಯ ಮಗಳು ದೆಬೊರಗೆ ಈಗ ಅರುವತ್ತೈದು ವರ್ಷ ವಯಸ್ಸು, ಎರಡನೆ ಪತ್ನಿ ಸ್ಲಾವಿಸ್ ರೋಡಿಚಿಲ್‍ನಲಿ ಜನಿಸಿದ ಟೊಮಾರ(36), ಪೆಟ್ರೋ(31) ಬೆನ್ನಿಯ ಇನ್ನೆರಡು ಹೆಣ್ಣು ಮಕ್ಕಳಾಗಿದ್ದಾರೆ. ಈ ಮೂವರು ಮಂದಿಯಲ್ಲಿ ಐವರು ಮೊಮ್ಮಕ್ಕಳಿದ್ದಾರೆ. ಮೊಮ್ಮಕ್ಕಳಲ್ಲಿ ಒಬ್ಬನಿಗೆ ಮಗು ಆಗಿದೆ.

ಫಾರ್ಮೂಲಾ 1 ಅನ್ನು ಇಂದಿನ ಎತ್ತರಕ್ಕೆ ಬೆಳೆಸಿದ ವ್ಯಕ್ತಿ ಬೆನ್ನಿಯಾಗಿದ್ದು, 1958ರಲ್ಲಿ ಬೆನ್ನಿ ಕಾರು ಚಾಲಕಾರಾಗಿ ಎಕ್ಸಿಸ್ಟನ್ ಫಾರ್ಮೂಲಾ 1ಗೆ ಬಂದಿದ್ದರು. 2017ರಲ್ಲಿ ಹೊರ ಹಾಕುವವರೆಗೆ 40ವರ್ಷಗಳವರೆಗೆ ಫಾರ್ಮೂಲಾ 1 ಮುಖ್ಯಸ್ಥರಾಗಿದ್ದರು.ಆದರೂ ಕಾರ್ ರೇಸ್‌ನಲ್ಲಿ ಬೆನ್ನಿಯ ಪ್ರಭಾವದಲ್ಲಿ ಯಾವುದೇ ಕುಂದು ಕೊರತೆ ಆಗಿರಲಿಲ್ಲ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.