ಗಂಗೂಲಿಗೆ ಹೃದಯಾಘಾತ: ಟೀಕೆಗಳ ಬಳಿಕ ಜಾಹೀರಾತು ತಡೆಹಿಡಿದ ಫಾರ್ಚ್ಯೂನ್ ಆಯಿಲ್

0
439

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಹೃದಯಾಘಾತ ಆದುದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಟೀಕೆಗೊಳಗಾದ ಫಾರ್ಚ್ಯೂನ್ ರೈಸ್ ಬ್ರಾಂಡ್ ಆಯಿಲ್ ಜಾಹೀರಾತನ್ನು ತಡೆಹಿಡಿದಿದೆ. ಜಾಹೀರಾತಿನಲ್ಲಿ ಗಂಗೂಲಿ ಇದ್ದರು. ಆಯಿಲ್ ಬಳಸಿದರೆ ಹೃದಯವನ್ನು ಆರೋಗ್ಯಕರವಾಗಿರಿಸಬಹುದು ಎಂದು ಗಂಗೂಲಿ ಹೇಳುತ್ತಾರೆ.

ಆದರೆ ಹೀಗೆ ಹೇಳುವ ಗಂಗೂಲಿಗೆ ಹೃದಯಾಘಾತ ಆಗಿದೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತು ಟ್ರೋಲ್‍ಗೊಳಗಾಗುತ್ತಿದೆ.
ಜನರಿಗೆ ಆಯಿಲ್ ಖರೀದಿಸಲು ಹೇಳುವ ವ್ಯಕ್ತಿಯ ಹೃದಯವನ್ನು ಸರಿಯಾಗಿರಿಸಲು ಕಂಪೆನಿಯಿಂದಾಗಿಲ್ಲವೇ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಪ್ರಶ್ನೆ ಎತ್ತುತ್ತಿದ್ದಾರೆ. ಭಾರೀ ಟೀಕೆಯ ನಂತರ ಆಯಿಲ್ ಜಾಹೀರಾತನ್ನು ಹಿಂಪಡೆಯಲು ಅದಾನಿ ವಿಲ್ಮರ್ ಕಂಪೆನಿ ತೀರ್ಮಾನಿಸಿತ್ತು.

ಕೊಲ್ಕತಾದ ಆಸ್ಪತ್ರೆಗೆ ದಾಖಲಾಗಿರುವ ಗಂಗೂಲಿಗೆ ಶನಿವಾರ ಆಂಜಿಯೊ ಪ್ಲಾಸ್ಟಿ ಮಾಡಲಾಗಿದೆ. ಇನ್ನೊಂದು ಸಲ ಅಂಜಿಯೊಪ್ಲಾಸ್ಟಿ ಆಗಬೇಕೆಂದು ವೈದ್ಯರು ಹೇಳುತ್ತಿದ್ದಾರೆ. ಆದರೆ ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಬಹುದು ಎಂದು ತಿಳಿಸಿದ್ದಾರೆ. ಗಂಗೂಲಿಗೆ ಈಗ 48 ವರ್ಷ ವಯಸ್ಸಾಗಿದೆ.

ಆದರೆ ಗಂಗೂಲಿಯವರು ಸದ್ಯ ತಾತ್ಕಾಲಿಕ ವಿರಾಮವನ್ನು ತೆಗೆದುಕೊಂಡಿದ್ದು, ತಮ್ಮ ಬ್ರಾಂಡ್‌ನ ಅಂಬಾಸಿಡರ್ ಆಗಿ ಮುಂದುವರೆಯಲಿದ್ದಾರೆ ಎಂದು ಅದಾನಿ ವಿಲ್ಮರ್ ಡೆಪ್ಯುಟಿ ಸಿಇಒ ಆಂಗ್ಷು ಮಲ್ಲಿಕ್ ಹೇಳಿದ್ದಾರೆ.