ಸಂಸತ್ತಿಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿ: ಫ್ರೆಂಚ್ ಸಂಸದೆಯಿಂದ ಸಭಾತ್ಯಾಗ

0
534

ಸನ್ಮಾರ್ಗ ವಾರ್ತೆ

ಪ್ಯಾರಿಸ್,ಸೆ.20: ಇಸ್ಲಾಮೋಫೊಬಿಯದ ಹೊಸ ವಾರ್ತೆಯೊಂದು ಫ್ರಾನ್ಸ್‌ನಲ್ಲಿ ವರದಿಯಾಗಿದೆ. ಫ್ರೆಂಚ್ ಪಾರ್ಲಿಮೆಂಟ್‍ಗೆ ಹಿಜಾಬ್ ಧರಿಸಿ ಬಂದುದನ್ನು ಪ್ರತಿಭಟಿಸಿ ಆಡಳಿತ ಪಾರ್ಟಿಯ ಪಾರ್ಲಿಮೆಂಟ್ ಸದಸ್ಯೆ ಸಭಾ ತ್ಯಾಗ ಮಾಡಿದ್ದಾರೆ. ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರೋನ್‍ರ ಪಾರ್ಟಿ ದಿ ರಿಪಬ್ಲಿಕ್ ಪಾರ್ಟಿಯ ಸಂಸದೆ ಆನ್ ಕ್ರಿಸ್ಟಿನ್ ಲಾಂಗ್ ಸಭಾ ತ್ಯಾಗ ಮಾಡಿದವರು. ಕ್ರಿಸ್ಟಿನ್ ತೀವ್ರ ಬಲಪಂಥೀಯ ವಕ್ತಾರೆ ಮತ್ತು ಫೆಮಿನಿಸ್ಟ್ ಆಗಿದ್ದಾರೆ.

ಫ್ರೆಂಚ್ ಪಾರ್ಲಿಮೆಂಟಿನ ಅಧ್ಯಯನ ಕಮಿಷನ್ ಮುಂದೆ ಚರ್ಚೆಯಲ್ಲಿ ಭಾಗವಹಿಸಲು ಹಿಜಾಬ್ ಧರಿಸಿ ಮರ್ಯಮ್ ಬುಜಿತೊಕ್ಸ್ ಎಂಬ ವಿದ್ಯಾರ್ಥಿನಿ ಬಂದಿದ್ದಳು. ಕೊರೋನ ವೈರಸ್ ಸಮಸ್ಯೆ ಯುವಕರು ಮತ್ತು ಮಕ್ಕಳಿಗೆ ಎಷ್ಟು ಹಾನಿಕಾರಕ ಎಂಬ ವಿಷಯದಲ್ಲಿ ಚರ್ಚಿಸಲು ಮರ್ಯಮ್ ಪಾರ್ಲಿಮೆಂಟ್ ಸಮಿತಿಯ ಮುಂದೆ ಹಾಜರಾಗಿದ್ದಳು. ಫ್ರೆಂಚ್ ವಿದ್ಯಾರ್ಥಿನಿ  ನ್ಯಾಶನಲ್ ಯೂನಿಯನ್ ಆಫ್ ಸ್ಟೂಡೆಂಟ್ಸ್ ಇನ್ ಫ್ರಾನ್ಸ್ (ಯುಎನ್‍ಇಎಫ್) ಇದರ ವಕ್ತಾರೆ ಕೂಡ ಮರ್ಯಮ್ ಆಗಿದ್ದಾಳೆ.

ಪ್ರಜಾಪ್ರಭುತ್ವದ ಹೃದಯವಾದ ರಾಷ್ಟ್ರೀಯ ಪಾರ್ಲಿಮೆಂಟ್‍ಗೆ ಹಿಜಾಬ್ ಧರಿಸಿ ಪ್ರವೇಶಿಸಿದ್ದನ್ನು ಒಪ್ಪಲಾರೆ. ತನಿಖಾ ಸಮಿತಿಯ ಮುಂದೆ ಹಾಗೆ ಹಾಜರಾಗಬಹುದು. ಆದರೆ ಪಾರ್ಲಿಮೆಂಟಿಗೆ ಬರುವಂತಿಲ್ಲ ಎಂದು ಆನ್ ಕ್ರಿಸ್ಟಿನ್ ಟ್ವೀಟ್ ಮಾಡಿದ್ದಾರೆ. ಇವರ ನಂತರ ಪಾರ್ಟಿಯ ಇತರ ಸಂಸದರೂ ಸಭಾತ್ಯಾಗ ಮಾಡಿದ್ದಾರೆ. ಹಿಜಾಬ್ ಶರಣಾಗತಿಯ ಗುರುತು ಎಂದು ಕ್ರಿಸ್ಟಿನ್ ಆರೋಪಿಸಿದ್ದಾರೆ. ಆದರೆ ಕ್ರಿಸ್ಟಿನಾರ ವರ್ತನೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಟೀಕಿಸಿದ್ದಾರೆ. ನ್ಯಾಶನಲ್ ಯೂನಿಯನ್ ಆಫ್ ಸ್ಟೂಡೆಂಟ್ಸ್ ಇನ್ ಫ್ರಾನ್ಸ್ ಕಿಸ್ಟಿನಾರ ವರ್ತನೆಯನ್ನು ಖಂಡಿಸಿದೆ.