ಶುಕ್ರವಾರ ಬೆಳಗ್ಗಿನವರೆಗೆ ಕುಮಾರಸ್ವಾಮಿ ಮುಖ್ಯಮಂತ್ರಿ: ಸದಾನಂದ ಗೌಡ

0
147

ಬೆಂಗಳೂರು, ಮೇ 23: ಕೇಂದ್ರ ಸಚಿವ ಡಿವಿ ಸದಾನಂದ ಗೌಡರು ಜೆಡಿಎಸ್, ಕಾಂಗ್ರೆಸ್ ಮೈತ್ರಿ ಶುಕ್ರವಾರ ಬೆಳಗ್ಗೆ ವರೆಗೆ ಮಾತ್ರ ಇರಲಿದೆ ಎಂದಿದ್ದಾರೆ. ಎಚ್‍ಡಿ ಕುಮಾರಸ್ವಾಮಿ ಸರಕಾರ ಮಾರ್ಚ್ 24ರಂದು ಪತನಗೊಳ್ಳಲಿದೆ. ನಂತರ ರಾಜ್ಯದಲ್ಲಿ ಹೊಸ ಸರಕಾರ ರಚನೆಯಾಗಲಿದೆ. ಕುಮಾರ ಸ್ವಾಮಿ ನೂರು ಶೇಕಡ ಮುಖ್ಯಮಂತ್ರಿ ಸ್ಥಾನ ಕಳಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಹೊಸ ಸರಕಾರ ರಚನೆಗೆ ಸಿದ್ಧತೆ ನಡೆಯುತ್ತಿದೆ. ಲೋಕಸಭಾ ಚುನಾವಣೆಯ ಪ್ರತಿಕೂಲ ಫಲಿತಾಂಶದಿಂದಾಗಿ ದೋಸ್ತಿ ಸರಕಾರ ಪತನವಾಗಲಿದೆ. ಮತಗಟ್ಟೆ ಸಮೀಕ್ಷೆಯಲ್ಲಿಯೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಕೆಟ್ಟ ಪ್ರದರ್ಶನ ಮಾಡಲಿದೆ ಎಂದು ತಿಳಿದು ಬಂದಿತ್ತು ಎಂದು ಕರ್ನಾಟಕದ ಮಾಜಿಮುಖ್ಯಮಂತ್ರಿಯೂ ಆದ ಸದಾನಂದ ಗೌಡ ಹೇಳಿದರು.