ಕತಾರ್‌ನೊಂದಿಗೆ ಎಲ್ಲ ಸಂಬಂಧಗಳ ಮರುಸ್ಥಾಪನೆ

0
176

ಸನ್ಮಾರ್ಗ ವಾರ್ತೆ

ರಿಯಾದ್,ಜ.6 ಕತಾರ್ ವಿರುದ್ಧ ದಿಗ್ಬಂಧನ ಹೇರಿದ ನಾಲ್ಕು ನೆರೆಯ ದೇಶಗಳು ಹಳೆಯ ರೀತಿಯಲ್ಲಿ ಎಲ್ಲ ಸಂಬಂಧಗಳನ್ನು ಮರುಸ್ಥಾಪಿಸಿದ್ದು ದಿಗ್ಬಂಧವನ್ನು ತೆರವುಗೊಳಿಸಿದೆ. ಇದರೊಂದಿಗೆ ವಾಯು, ಭೂ, ಜಲ ಮಾರ್ಗಗಳ ದಿಗ್ಬಂಧನ ಕೊನೆಗೊಂಡಿದ್ದು ಈ ದೇಶಗಳಿಗೆ ಇನ್ನು ನೇರ ಪ್ರಯಾಣ ಬೆಳೆಸುವ ಅವಕಾಶ ಮರಳಿ ದೊರೆಯಲಿದೆ. ಮಂಗಳವಾರ ಸಂಜೆ ಸೌದಿಯ ಅಲ್ ಉಲದಲ್ಲಿ ನಡೆದ 41ನೇ ಜಿಸಿಸಿ ಶೃಂಗದಲ್ಲಿ ಸದಸ್ಯ ರಾಜ್ಯಗಳು ಪರಿಸ್ಪರ ಒಪ್ಪಂದಕ್ಕೆ ಸಹಿ ಹಾಕಲಾಯಿತು ಎಂದು ಸೌದಿ ಅರೇಬಿಯದ ವಿದೇಶ ಸಚಿವ ಫೈಸಲ್ ಬಿನ್ ಫರ್ಹಾನ್ ಈ ವಿಷಯವನ್ನು ತಿಳಿಸಿದರು.

ಶೃಂಗದಲ್ಲಿ ದೃಢವಾದ ಒಗ್ಗಟ್ಟು ಮೂಡಿಸುವ ಒಪ್ಪಂದಕ್ಕೆ ಹಸ್ತಾಕ್ಷರ ಮಾಡಲಾಯಿತು ಎಂದು ಅವರು ಹೇಳಿದರು. ಎಲ್ಲ ಭಿನ್ನಮತವನ್ನು ಮರೆತು ರಾಜತಾಂತ್ರಿಕ ಸಂಬಂಧಗಳು ಮರಳಿವೆ. ಎಲ್ಲರೂ ಸಂತೃಪ್ತರು ಮತ್ತು ಒಂದು ಸ್ಥಳದಲ್ಲಿ ಒಟ್ಟು ಸೇರಿರುವುದರಲ್ಲಿ ಸಂತೋಷವಿದೆ. ಇದು ರಾಜತಾಂತ್ರಿಕ ಸಂಬಂಧಗಳು, ವಿಮಾನಗಳ ಮರಳುವಿಕೆಯಾಗಿದೆ. ಇವೆಲ್ಲ ಈಗ ಸಾಧಾರಣ ಸ್ಥಿತಿಗೆ ಬಂದಿವೆ. ಯುಎಇ, ಬಹ್ರೈನ್, ಈಜಿಪ್ಟ್ ಸೌದಿ ದೋಹದೊಂದಿಗೆ ಸಂಬಂಧವನ್ನು ಮರುಸ್ಥಾಪಿಸಲು ಸಮ್ಮತಿಸಿದ್ದಾರೆ. ಒಪ್ಪಂದ ಜಾರಿಯಲ್ಲಿ ಭರವಸೆಯಿದ್ದು ರಾಜಕೀಯ ಇಚ್ಛಾಶಕ್ತಿ ಮತ್ತು ಉತ್ತಮ ವಿಶ್ವಾಸ ಇದೆ ಎಂದು ವಿದೇಶ ಸಚಿವರು ಹೇಳಿದರು.

ಕುವೈಟ್, ಅಮೆರಿಕ, ಸೌದಿ ಅರೇಬಿಯ ಮಧ್ಯಸ್ಥಿಕೆ ವಹಿಸಿದ ಹಲವರು ಚರ್ಚೆಗಳಲ್ಲಿ ಸೋಮವಾರ ರಾತ್ರೆ ಜಿಸಿಸಿ ಶೃಂಗಕ್ಕೆ ಪೂರ್ವಭಾವಿಯಾಗಿ ದಿಗ್ಬಂದನ ತೆರವುಗೊಳಿಸಲಾಗಿತ್ತು ಎಂದು ಕುವೈಟ್ ವಿದೇಶ ಸಚಿವರು ಘೋಷಿಸಿದರು. ನಂತರ ಕತಾರ್‌ನ ಗಡಿಗಳನ್ನು ಪುನಃ ತೆರೆಯುವುದಾಗಿ ಸೌದಿ ಅರೇಬಿಯ ಘೋಷಿಸಿತ್ತು.