ಕೊರೊನಾ: ಜಿ 20 ತುರ್ತು ಶೃಂಗಸಭೆ; ಮೋದಿ ಭಾಗಿ

0
266

ಸನ್ಮಾರ್ಗ ವಾರ್ತೆ

ರಿಯಾದ್,ಮಾ. 26: ವಿಶ್ವದಲ್ಲಿ ಕೊರೊನಾ ಭಯಾನಕ ಸ್ಥಿತಿಯನ್ನು ತಂದು ಇಟ್ಟಿರುವ ಹಿನ್ನೆಲೆಯಲ್ಲಿ ಈ ಕುರಿತು ಚರ್ಚಿಸುವುದಕ್ಕಾಗಿ ಜಿ 20 ಸದಸ್ಯ ದೇಶಗಳ ತುರ್ತು ಶೃಂಗ ಸೌದಿ ಅರೇಬಿಯ ದೊರೆ ಸಲ್ಮಾನ್‍ರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ವೀಡಿಯೊ ಕಾನ್ಫರೆನ್ಸ್ ಮೂಲಕ ಗುರುವಾರ ಸಭೆ ನಡೆಯುತ್ತಿದ್ದು ವಿಶ್ವಸಂಸ್ಥೆ, ವಿಶ್ವಾರೋಗ್ಯ ಸಂಘಟನೆ ಪ್ರತಿನಿಧಿಗಳು ಭಾಗವಹಿಸುವರು. ಕೊರೊನಾ ವ್ಯಾಪಿಸದಂತೆ ತಡೆಯಲು ಜಾಗತಿಕ ಆರ್ಥಿಕ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಪರಿಹರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶೃಂಗದಲ್ಲಿ ಚರ್ಚಿಸಲಾಗುವುದು. ಜೊರ್ಡಾನ್, ಸ್ಪೇನ್, ಸಿಂಗಾಪುರ, ಸ್ವಿಟ್ಝರ್‍ಲೆ೦ಡ್, ಯುಎಇ ಮೊದಲಾದ ದೇಶಗಳು ಮತ್ತು ಜಿಸಿಸಿ ಅಧ್ಯಕ್ಷರೂ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೌದಿಯ ನೇತೃತ್ವದಲ್ಲಿ ಜಿ-20 ಸದಸ್ಯ ದೇಶಗಳ ವಿತ್ತ ಸಚಿವರು, ಸೆಂಟ್ರಲ್ ಬ್ಯಾಂಕ್ ಗವರ್ನರ್ ಗಳ ವೀಡಿಯೊ ಕಾನ್ಫರೆನ್ಸ್ ಸಭೆ ಮೊನ್ನೆ ನಡೆದಿತ್ತು. ಇದಾಗಿ ಈಗ ದೇಶಗಳ ಮುಖ್ಯಸ್ಥರ ತುರ್ತು ಸಭೆ ನಡೆಯುತ್ತಿದೆ. ವೀಡಿಯೊದ ಮೂಲಕ ನಡೆಯುವ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವುದಾಗಿ ಟ್ವೀಟ್ ಮಾಡಿದ್ದಾರೆ.

ಕೊರೊನಾ ಸಮಸ್ಯೆಗೆ ಸಂಬಂಧಿಸಿ ಫಲಪ್ರದವಾದ ಚರ್ಚೆಯನ್ನು ತಾನು ನಿರೀಕ್ಷಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here