ಗ್ಯಾಂಜೆಟಿಕ್ ಡೋಲ್ಫಿನ್ ಹತ್ಯೆ:ಉತ್ತರ ಪ್ರದೇಶದಲ್ಲಿ ಮೂವರ ಬಂಧನ

0
380

ಸನ್ಮಾರ್ಗ ವಾರ್ತೆ

ಲಕ್ನೊ:ಅಳಿವಿನ ಅಂಚಿನಲ್ಲಿರುವ(ಗ್ಯಾಂಜೆಟಿಕ್) ಡೊಲ್ಫಿನ್‌ನನ್ನು ದೊಣ್ಣೆ, ಕೊಡಲಿಗಳಿಂದ ಹೊಡೆದು ಕೊಂದು ಹಾಕಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 31ಕ್ಕೆ ಡೊಲ್ಫಿನ್‍ನನ್ನು ಯುವಕರು ಕ್ರೂರವಾಗಿ ಕೊಂದು ಹಾಕಿದ್ದು ಅದನ್ನು ಚಿತ್ರೀಕರಿಸಿ ರಕ್ತ ಹರಿದುಹೋಗುತ್ತಿರುವ ದೃಶ್ಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿ ಪ್ರಚಾರ ಮಾಡಿದ್ದರು.

ಇದೇ ವೇಳೆ ಡೊಲ್ಪಿನ್‍ಗೆ ತೊಂದರೆ ಕೊಡುವುದು ಅಪರಾಧ ಎಂದು ಒಬ್ಬರು ಹೇಳುವುದು ಕೂಡ ವೀಡಿಯೊದಲ್ಲಿ ಕೇಳಿಸುತ್ತಿದೆ. ನಂತರ, ಯುವಕರು ಡೊಲ್ಪಿನ್‍ನನ್ನು ಕೊಂದು ಹಾಕಿದ್ದಾರೆ.

ವೀಡಿಯೊ ವೈರಲ್ ಆದ ನಂತರ ಅರಣ್ಯ ಇಲಾಖೆಯ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು ಡೊಲ್ಪಿನ್‍ನ ಮೃತದೇಹವು ಸಮೀಪದ ಕಾಲುವೆಯಲ್ಲಿ ಸಿಕ್ಕಿದೆ. ಹತ್ಯೆ ನಡೆಸಿದ ಮೂವರು ಯುವಕರನ್ನು ಬಂಧಿಸಲಾಗಿದೆ.