ಅಮೆರಿಕದಲ್ಲಿ ಕೊರೋನ ಹರಡುವ ಪಾರ್ಟಿ: ಮೊದಲು ಕೊರೋನ ಸೋಂಕು ತಗುಲಿದವನಿಗೆ ಬಹುಮಾನ!

0
762

ಸನ್ಮಾರ್ಗ ವಾರ್ತೆ

ಅಮೆರಿಕ,ಜು.6: ಅತ್ಯಂತ ತೀವ್ರವಾಗಿ ಕೊರೋನ ವ್ಯಾಪಿಸುತ್ತಿರುವ ಅಮೆರಿಕದಲ್ಲಿ ವಿಚಿತ್ರ ಸ್ಪರ್ಧೆಯನ್ನು ಯುವಕರು ಹಮ್ಮಿಕೊಂಡಿದ್ದಾರೆ. ಕೊರೋನ ನಿಯಂತ್ರಣಕ್ಕೆ ಲೋಕಾದ್ಯಂತ ಆರೋಗ್ಯ ಕಾರ್ಯಕರ್ತರು ಮತ್ತು ಸರಕಾರ ಶ್ರಮಿಸುತ್ತಿರುವ ವೇಳೆ ರೋಗ ಹರಡುವ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದಾರೆ. ಕೊರೋನ ಬಂದವರಿಗೆ ರೋಗ ಗುಣವಾಗದ್ದರಿಂದ ಪಾರ್ಟಿಯನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಕೊರೋನ ಪೀಡಿತರೂ ಭಾಗವಹಿಸುತ್ತಾರೆ. ಪಾರ್ಟಿಗೆ ಬಂದವರಲ್ಲಿ ಮೊದಲು ವೈರಸ್ ಯಾರಲ್ಲಿ ಕಂಡು ಬರುತ್ತದೆಯೋ ಆತನನ್ನು ಜಯಶಾಲಿ ಎಂದು ಘೊಷಿಸಲಾಗುತ್ತದೆ.

ಭಾಗವಹಿಸುವರಲ್ಲಿ ಪಡೆದುಕೊಂಡ ಹಣದಿಂದ ಬಹುಮಾನ ಕೊಡಲಾಗುತ್ತದೆ. ಅಲಬಾಮದ ಟಸ್ಕಲೂಸ್ ನಗರದಲ್ಲಿ ಇಂತಹ ವಿಚಿತ್ರ ಕೊರೋನ ಪಾರ್ಟಿ ನಡೆಯುವುದರ ವರದಿಯನ್ನು ಸಿಎನ್‍ಎನ್ ವರದಿ ಮಾಡಿದೆ.

ಇಂತಹ ಪಾರ್ಟಿಗಳು ಕೇವಲ ವದಂತಿಯೆಂದು ಮೊದಲು ತಿಳಿದುಕೊಂಡಿದ್ದೆವು ಎಂದು ಅಲಬಮ ಸಿಟಿ ಕೌನ್ಸಿಲ್ ಸದಸ್ಯ ಸೊನ್ಯ ಮೆಕನ್ಸಿಟ್ರೀ ಹೇಳಿದರು. ನಂತರ ತನಿಖೆ ಮಾಡಿದ ಕೋವಿಡ್-19 ಪಾರ್ಟಿಗಳು ನಡೆಯುವುದು ನಿಜವೆಂದು ಗೊತ್ತಾಯಿತು. ಕೆಲವು ದಿನಗಳಲ್ಲಿ ಹಲವಾರು ಕೊರೋನ ಪಾರ್ಟಿಗಳು ನಡೆದಿವೆ. ಇದನ್ನು ತಮಾಷೆಯೆಂದು ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ಮೆಕನ್ಸ್ಟ್ರೀ ಹೇಳಿದರು.

ಇದರಲ್ಲಿ ಪಾಲ್ಗೊಂಡವರು ಮಾತ್ರ ಕೊರೋನ ರೋಗಿಗಳಾಗುವುದಲ್ಲದೇ ಮನೆಯವರಿಗೂ ಹರಡುವ ಅಪಾಯವಿದೆ ಎಂದು ಅವರು ಹೇಳಿದರು.

ಈ ಹಿಂದೆ ವಾಷಿಂಗ್ಟನಿನ್ ವಾಲ್ಲಾವಾಲ್ಲ ಕೌಂಟಿಯಲ್ಲಿಯೂ ಇಂತಹ ಪಾರ್ಟಿಗಳು ನಡೆದಿದೆ ಎನ್ನಲಾಗುತ್ತಿದೆ. ಇಪ್ಪತ್ತು ಮಂದಿಯ ಪಾರ್ಟಿಯಲ್ಲಿ ಇಬ್ಬರಿಗೆ ಕೊರೋನ ಬಂದ ವರದಿಯಾಗಿದೆ. ಅಲಬಾಮದಲ್ಲಿ ಇಂತಹ ಕೊರೋನ ಪಾರ್ಟಿಗಳ ವಿರುದ್ಧ ಮುನ್ನೆಚ್ಚರಿಕೆ ವಹಿಸುತ್ತಿದ್ದು, ಅಧಿಕಾರಿಗಳೂ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದಾರೆ. ಅಮೆರಿಕದಲ್ಲಿ ಅತೀ ಹೆಚ್ಚು ಕೊರೋನ ರೋಗಿಗಳಿದ್ದು ಲೆಕ್ಕಪ್ರಕಾರ 29,36,122 ಮಂದಿಗೆ ವೈರಸ್ ತಗುಲಿದೆ. 1,32,318 ಮಂದಿ ಮೃತಪಟ್ಟಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.