ಬಿಜೆಪಿಗೆ ಸೇರುತ್ತಿದ್ದರೆ ವಾಜಪೇಯಿಯವರ ಕಾಲದಲ್ಲಿಯೇ ಸೇರುತ್ತಿದ್ದೆ: ಗುಲಾಂ ನಬಿ ಆಝಾದ್

0
591

ಸನ್ಮಾರ್ಗ ವಾರ್ತೆ

ಶ್ರೀನಗರ: ತಾನು ಬಿಜೆಪಿಗೆ ಸೇರ್ಪಡೆಗೊಳ್ಳುವುದಾಗಿದ್ದರೆ ಅದು ವಾಜಪೇಯಿಯವರ ಕಾಲದಲ್ಲಿಯೇ ಆಗಿರುತ್ತಿತ್ತು ಎಂದು ಗುಲಾಮ್ ನಬಿ ಆಝಾದ್ ಹೇಳಿದ್ದಾರೆ. ರಾಜ್ಯಸಭೆಯ ಕಾಲವಧಿ ಮುಗಿಸಿದ ಬಳಿಕ ಕಾಶ್ಮೀರಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್‍ರಿಗೆ ಭಾರೀ ಸ್ವಾಗತವನ್ನು ಕಾಂಗ್ರೆಸ್ ಕಾರ್ಯಕರ್ತರು ನೀಡಿದ್ದಾರೆ.

ಗುಲಾಂ ನಬಿ ಆಝಾದ್ ರಾಜ್ಯಸಭಾ ಸದಸ್ಯತ್ವದ ಕಾಲವಧಿ ಕೊನೆಗೊಳ್ಳುವ ವೇಳೆ ಪ್ರಧಾನಿ ಮೋದಿ ಭಾವನಾತ್ಮಕವಾಗಿ ಮಾತನಾಡಿದ್ದರು. ಆದ್ದರಿಂದ ಬಿಜೆಪಿ ಆಝಾದ್‍ಗೆ ಗಾಳ ಹಾಕುತ್ತಿದೆ ಎಂದು ಊಹಾಪೋಹಗಳು ಹರಡಿಕೊಂಡಿತ್ತು.

ಕಾಶ್ಮೀರದ ಶಹೀದ್ ಚೌಕ್‍ನಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ನಾಯಕರನ್ನು ಉದ್ದೇಶಿಸಿ ಮಾತನಾಡುವ ವೇಳೆ ಎಲ್ಲ ವದಂತಿಗಳಿಗೆ ಆಝಾದ್ ತೆರೆ ಎಳೆದರು.

ನಾನು ಪಾರ್ಲಿಮೆಂಟಿನಿಂದ ನಿವೃತ್ತ. ರಾಜಕೀಯದಿಂದಲ್ಲ. ಒಂದು ವೇಳೆ ನಾನು ಬಿಜೆಪಿಗೆ ಹೋಗುತ್ತಿದ್ದರೆ ಅದು ವಾಜಪೇಯಿ ಕಾಲದಲ್ಲಿ ಆಗುತ್ತಿತ್ತು ಎಂದು ಗುಲಾಮ್ ನಬಿ ಹೇಳಿದರು. ಜಮ್ಮು ಕಾಶ್ಮೀರ ಮತ್ತು ಹೊರಗೆ ಕಾಂಗ್ರೆಸ್ಸನ್ನು ಬಲಪಡಿಸುವ ಪ್ರಯತ್ನಗಳನ್ನು ಮುಂದುವರಿಸುವುದಾಗಿ ಅವರು ಹೇಳಿದರು. ಪಾರ್ಟಿಯಲ್ಲಿ ತಾರತಮ್ಯ ಏನಿಲ್ಲ. ಅಭಿಪ್ರಾಯ ಭಿನ್ನ-ಭಿನ್ನ ಇರುತ್ತದೆ. ಪಾರ್ಟಿಯಲ್ಲಿರುವವರಲ್ಲಿ ಒಂದೇ ಗುರಿ ಇರುತ್ತದೆ ಎಂದು ಗುಲಾಂ ನಬಿ ಆಝಾದ್ ಹೇಳಿದರು.