ಉತ್ತರಪ್ರದೇಶ| ಅಪ್ರಾಪ್ತ ಬಾಲಕಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ; ಉದ್ರೀಕ್ತ ಗ್ರಾಮಸ್ಥರಿಂದ ಪೊಲೀಸರಿಗೆ ಕಲ್ಲೆಸೆತ

0
321

ಸನ್ಮಾರ್ಗ ವಾರ್ತೆ

ಲಕ್ನೊ: ಉತ್ತರಪ್ರದೇಶದಲ್ಲಿ ಹುಲ್ಲು ತರಲು ಹೋದ 16 ವರ್ಷದ ಬಾಲಕಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆಲಿಗಢ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಘಟನೆಯಿಂದ ಕೋಪತಪ್ತರಾದ ಜನರು ಪೊಲೀಸರಿಗೆ ಕಲ್ಲೆಸದಿದ್ದು ಪೊಲೀಸಧಿಕಾರಿಗಳು ಗಾಯಗೊಂಡಿದ್ದಾರೆ. ಹುಲ್ಲು ತರಲು ಹೋದ ಹುಡಗಿ ಕಾಣೆಯಾಗಿದ್ದಳು. ನಂತರ ಗ್ರಾಮಸ್ಥರು ಬಾಲಕಿಗಾಗಿ ಹುಡುಕಾಟ ನಡೆಸಿದಾಗ ಕೊಲೆಯಾದ ಸ್ಥಿತಿಯಲ್ಲಿ ಕಂಡು ಬಂದಳು ಎಂದು ಪೊಲೀಸಧಿಕಾರಿ ಮುನಿರಾಜ್ ಹೇಳಿದರು.

ತನಿಖೆ ಆರಂಭಿಸಲಾಗಿದ್ದು ಆರೋಪಿಗಳೆಂದು ಶಂಕೆ ಇರುವ ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಫೆಬ್ರುವರಿ 17ಕ್ಕೆ ಉನ್ನಾವೊ ಜಿಲ್ಲೆಯಲ್ಲಿ ಇಂತಹದ ಪರಿಸ್ಥಿತಿಯಲ್ಲಿ ಇಬ್ಬರು ಬಾಲಕಿಯರ ಕೊಲೆ ನಡೆದಿತ್ತು. ಇನ್ನೊಬ್ಬಳು ಹುಡುಗಿ ಚಿಂತಾಜನಕ ಸ್ಥಿತಿಯಲ್ಲಿ ಕಂಡು ಬಂದಿದ್ದಳು. ಮೂವರು ಬಾಲಕಿಯರು ಕೂಡ ಜಾನುವಾರುಗಳಿಗೆ ಹುಲ್ಲು ತರಲು ಹೋಗಿದ್ದರು.