ಕೊನೆಗೂ ಒಪ್ಪಿಗೆ ಸೂಚಿಸಿದ ಕೇಂದ್ರ ಸರಕಾರ; ರೈತರ ಹೋರಾಟದ ಕುರಿತು ಪಾರ್ಲಿಮೆಂಟ್ ಚರ್ಚೆಗೆ ಸಮ್ಮತಿ

0
431

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಫೆ.3: ರೈತರ ಹೋರಾಟವನ್ನು ಪಾರ್ಲಿಮೆಂಟಿನಲ್ಲಿ ಚರ್ಚಿಸಲು ಕೇಂದ್ರ ಸರಕಾರ ಸಮ್ಮತಿಸಿದೆ. ರಾಜ್ಯಸಭೆಯಲ್ಲಿಯೂ ಈ ಕುರಿತು ಚರ್ಚೆ ನಡೆಯಲಿದೆ. ಇದಕ್ಕೆ ಹದಿನೈದು ಗಂಟೆ ಸಮಯ ನೀಡಲಾಗುವುದು. ಇದಕ್ಕಾಗಿ ಎರಡು ದಿನಗಳವರೆಗಿನ ಪ್ರಶ್ನೋತ್ತರ ಸಮಯ ರದ್ದುಪಡಿಸಲಾಗಿದೆ. 16 ಪ್ರತಿಪಕ್ಷ ಪಾರ್ಟಿಗಳೂ ರೈತರ ಹೋರಾಟದ ಕುರಿತು ಚರ್ಚಿಸಬೇಕೆಂದು ಆಗ್ರಹಿಸಿತ್ತು. ಐದು ಗಂಟೆಗಳ ಚರ್ಚೆಗೆ ಅವಕಾಶ ಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿದ್ದರೆ ಕೇಂದ್ರ ಸರಕಾರ 15 ಗಂಟೆಗಳ ಸಮಯಾವಕಾಶವನ್ನು ಅನುಮತಿಸಿದೆ.

ಸರಕಾರ ಅನುಮತಿಸುವುದಾದರೆ ರೈತ ಹೋರಾಟವನ್ನು ಪಾರ್ಲಿಮೆಂಟಿನಲ್ಲಿ ಚರ್ಚಿಸಬಹುದು ಎಂದು ಗುಲಾಂ ನಬಿ ಆಝಾದ್ ಹೇಳಿದರು. ನಂತರ ಸಚಿವ ಪ್ರಹ್ಲಾದ್ ಜೋಷಿ ಚರ್ಚೆಗೆ ಸಿದ್ಧ ಎಂದು ತಿಳಿಸಿದರು. ಆದರೆ, ಶುಕ್ರವಾರದ ಪ್ರಶ್ನೋತ್ತರ ಸಮಯವನ್ನು ರದ್ದುಪಡಿಸಲಾಗಿದೆ.