ವಿದೇಶ ದೇಣಿಗೆಗೆ ಆಧಾರ್ ಕಡ್ಡಾಯ- ಕೇಂದ್ರ ಸರಕಾರ

0
426

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.21: ವಿದೇಶಿ ದೇಣಿಗೆ ಪಡೆಯಲು ಸ್ವಯಂಸೇವಾ ಸಂಘಟನೆಗಳ ನೋಂದಾಯಿತ ಪ್ರಧಾನ ಪದಾಧಿಕಾರಿಗಳ ಆಧಾರ್ ನಂಬರ್ ಕಡ್ಡಾಯಗೊಳಿಸುವ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿದ್ದು, ಸಾರ್ವಜನಿಕ ಕಾರ್ಯಕರ್ತರು ವಿದೇಶದಿಂದ ದೇಣಿಗೆ ಸ್ವೀಕರಿಸುವಂತಿಲ್ಲ.

ದೇಣಿಗೆ ಹೇಗೆ ಬಳಸಲಾಗುತ್ತಿದೆ ಎಂದು ದೂರುಗಳನ್ನು ಪರಿಗಣಿಸಿ ಸಂಘಟನೆಗಳ ಮೇಲೆ ಫಂಡ್ ವಿನಿಯೋಗದ ಕುರಿತು ನಿಷೇಧ ಹೇರಲು ಕಾನೂನು ತಿದ್ದುಪಡಿಯಲ್ಲಿ ಸರಕಾರಕ್ಕೆ ಅಧಿಕಾರ ನೀಡಲಾಗುತ್ತಿದೆ. ಕಾನೂನು ಉಲ್ಲಂಘನೆ ಸಾಬೀತಾದರೆ ಮಾತ್ರ ನಿಷೇಧ ಮತ್ತು ನಿಯಂತ್ರಣ ಹೇರುವ ಅಧಿಕಾರ ಈಗ ಸರಕಾರಕ್ಕೆ ಇದೆ.

ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ಮಸೂದೆ ಗೃಹ ಸಚಿವ ನಿತ್ಯಾನಂದ್ ರಾಯ್ ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಸ್ವಯಂಸೇವಾ ಸಂಘಟನೆಗಳಿಗೂ ಅಸೋಸಿಯೇಶನ್‍ಗಳಿಗೂ ಎಫ್‌ಸಿಆರ್‌ಎ ಸರ್ಟಿಫಿಕೇಟ್ ಸಲ್ಲಿಸಲು ಅನುಮತಿ ನೀಡಲಾಗುವುದು ಎಂದು ಕಾನೂನು ತಿದ್ದುಪಡಿಯಲ್ಲಿದೆ.

ಈ ಕಾನೂನಿನ ಪ್ರಕಾರ ವಿದೇಶದಿಂದ ದೇಣಿಗೆ ಸ್ವೀಕರಿಸುವ ಧಾರ್ಮಿಕ ಸಂಸ್ಥೆಗಳಿಗೆ ಅನುಮತಿಯನ್ನು ಮುಂದುವರಿಸಲಾಗುವುದು ಎಂದು ಸಚಿವರು ತಿಳಿಸಿದರು. ಇದರಲ್ಲಿ ತಾರತಮ್ಯ ಇರುವುದಿಲ್ಲ. ಆದರೆ ಸಂಸ್ಥೆಗಳು ಅವರ ಉದ್ದೇಶದಿಂದ ಬೇರೆ ಏನೂ ಮಾಡಬಾರದು. ದೇಶದ ಸುರಕ್ಷೆಗೆ ಬೆದರಿಕೆಯಾಗಬಾರದು. ದೇಣಿಗೆ ಪಡೆದುದರಲ್ಲಿ ಶೇ.20 ರಷ್ಟು ಮಾತ್ರ ಆಡಳಿತ ಕಾರ್ಯಗಳಿಗೆ ಬಳಸಬಹುದು. ಈಗ ಐವತ್ತರಷ್ಟು ಆಡಳಿತ ಕಾರ್ಯಕ್ಕೆ ವಿನಿಯೋಗಿಸುವ ಅವಕಾಶ ಇದೆ.

ಮಸೂದೆಯನ್ನು ಕಾಂಗ್ರೆಸ್ಸಿನ ಮನೀಶ್ ತಿವಾರಿ ವಿರೋಧಿಸಿದರು. ವಿದೇಶಿ ದೇಣಿಗೆ ನಿಯಂತ್ರಣ ಕಾನೂನು ವ್ಯವಸ್ಥೆಯಲ್ಲಿ ಸಡಿಲಿಕೆಯಾಗಬೇಕಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ತೃಣಮೂಲ ಕಾಂಗ್ರೆಸ್ ಕೂಡ ಈ ನಿಲುವಿಗೆ ವಿರೋಧ ವ್ಯಕ್ತಪಡಿಸಿದೆ. ವಿದೇಶಿ ದೇಣಿಗೆ ತಡೆಯಲಿಕ್ಕಾಗಿ ದೇಣಿಗೆ ತರಲಾಗುತ್ತಿದೆ ಎಂದು ತೃಣಮೂಲ ಸಂಸದ ಸೌಗತ್ ರಾಯ್ ಆರೋಪಿಸಿದರು. ಅನವಶ್ಯಕ ನಿಯಂತ್ರಣಗಳಿಗೆ ಸರಕಾರ ಕೈಹಾಕಿದೆ ಎಂದು ಅವರು ಆರೋಪಿಸಿದರು.