ಬಂಡವಾಳಶಾಹಿಗಳಿಗೆ ಮಣೆ ಹಾಕುವುದು ಬಿಟ್ಟು, ರೈತರ ಸಂಕಷ್ಟಕ್ಕೆ ಸರಕಾರ ನೆರವಾಗಲಿ: ವೆಲ್ಫೇರ್ ಪಾರ್ಟಿ

0
429

ಸನ್ಮಾರ್ಗ ವಾರ್ತೆ

ಬೆಂಗಳೂರು: ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿರುವ ಬಿಜೆಪಿ ಸರಕಾರವು ಬಂಡವಾಳಶಾಹಿಗಳಿಗೆ ಮಣೆಹಾಕುತ್ತಿರುವುದು ಸೋಜಿಗದ ಸಂಗತಿ. ದೇಶದ ಬೆನ್ನೆಲುಬು ದೇಶಕ್ಕೆ ಅನ್ನ ನೀಡುವ ಅನ್ನದಾತನ ಬಗ್ಗೆ ಕಾಳಜಿ ಇಲ್ಲದ ಸರಕಾರದ ಕ್ರಮ ಮಾತ್ರ ಖಂಡನೀಯ.

ತಿಂಗಳುಗಳಿಂದ ರಾಷ್ಟ್ರರಾಜಧಾನಿಯಲ್ಲಿ ಧರಣಿ ನಿರತ ರೈತರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸದ ಸರಕಾರದ ಧೋರಣೆ ಖಂಡನೀಯ. ಬಿಹಾರ, ಪಶ್ಚಿಮ ಬಂಗಾಳ ಸೇರಿ ನಾನಾ ರಾಜ್ಯಗಳಲ್ಲಿ ಚುನಾವಣೆ ನಡೆಸಲು ಆಡಳಿತ ಯಂತ್ರವನ್ನೇ ಬಳಕೆ ಮಾಡುತ್ತಿರುವ ಬಿಜೆಪಿ ರೈತರ ಭವಾನಿಗೆ ಕಿವಿಗೊಡದೆ ಇರುವುದು ವಿಪರ್ಯಾಸ.

ದೇಶದ ಬೆನ್ನೆಲುಬು ರೈತರು ಕೇವಲ ಬಾಯಿಮಾತಿನಲ್ಲಿ ಪುಸಲಾಯಿಸಿ ಬಂಡವಾಳಶಾಹಿಗಳಿಗೆ ಮಣೆ ಹಾಕುತ್ತಿರುವ ಮೋದಿ ನೇತೃತ್ವದ ಕೇಂದ್ರ ಸರಕಾರ ರಾಷ್ಟ್ರದಲ್ಲಿ ಅರಾಜಕತೆಯನ್ನು ಸೃಷ್ಟಿ ಮಾಡಿದೆ. ರಾಜ್ಯ ರಾಷ್ಟ್ರಗಳಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದ್ದು ಅಲ್ಪಸಂಖ್ಯಾತರು ದಲಿತರು ಹಿಂದುಳಿದವರಿಗೆ ಇಲ್ಲದಂತಾಗಿದೆ. ಭಯದ ವಾತಾವರಣದಲ್ಲಿ ಜನರು ಬದುಕುವಂತಾಗಿದೆ.

ಇಂದು ರೈತರ ದಿನಾಚರಣೆಯ ಆಚರಿಸುತ್ತಿರುವುದು ಕೇವಲ ಹೆಸರಿಗಷ್ಟೆ ಎನ್ನುವಂತಾಗಿದೆ. ರೈತರ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿರುವ ಸರಕಾರದ ಕ್ರಮ ಮಾರಕವಾಗಿದೆ. ಕೃಷಿ ವಲಯವನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರಕಾರದ ತೀರ್ಮಾನ ದೇಶದ ಜನರನ್ನು ಒಕ್ಕಲೆಬ್ಬಿಸುವಂತೆ ಮಾಡಿದೆ.

ಕೃಷಿಕರು ನಾಡಿನ ಬೆನ್ನೆಲುಬು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಹಾಗೂ ಕೇಂದ್ರ ಸರಕಾರಗಳು ರೈತ ಪರ ಯೋಜನೆಗಳನ್ನು ಜಾರಿಗೆ ತರಬೇಕು. ರಿಯಾಯಿತಿ ದರದಲ್ಲಿ ಕೃಷಿ ಪರಿಕರಗಳನ್ನು ರೈತರಿಗೆ ಪೂರೈಕೆ ಮಾಡಬೇಕು. ವೈಜ್ಞಾನಿಕ ಬೆಲೆಯನ್ನು ರೈತರಿಗೆ ನಿಗದಿಪಡಿಸಬೇಕು. ಕೃಷಿ ವಲಯವನ್ನು ಖಾಸಗೀಕರಣ ಮಾಡಲು ಹೊರಟಿರುವ ಕ್ರಮ ಕೈ ಬೀಡಬೇಕು. ಕೃಷಿಕರು, ಅಲ್ಪಸಂಖ್ಯಾತರು, ದಲಿತರಿಗೆ ರಕ್ಷಣೆ ನೀಡಬೇಕು.

ರಾಷ್ಟ್ರಕ್ಕೆ ಅನ್ನ ನೀಡುವ ಅನ್ನದಾತರ ಮೇಲಿನ ದೌರ್ಜನ್ಯ ಕೊನೆಗೊಳಿಸಿ ರೈತರ ಸಮಸ್ಯೆಗಳಿಗೆ ಸರಕಾರಗಳು ಸ್ಪಂದಿಸುವ ಮೂಲಕ ರೈತ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕೆನ್ನುವುದು ನಮ್ಮ ಒತ್ತಾಯವಾಗಿದೆ ಎಂದು ವಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷರಾದ ಅಡ್ವೋಕೇಟ್ ತಾಹೀರ್ ಹುಸೇನ್ ಆಗ್ರಹಿಸಿದ್ದಾರೆ.