ಅರಫಾ ಸಂಗಮ: ಮಸ್ಜಿದುನ್ನಮಿರದಲ್ಲಿ ಹಜ್ಜ್ ಯಾತ್ರಾರ್ಥಿಗಳು

0
76

ಸನ್ಮಾರ್ಗ ವಾರ್ತೆ

ಜಿದ್ದ,ಜು.30: ಹಜ್ಜ್‌ನ ಪ್ರಧಾನ ಕರ್ಮಗಳಲ್ಲೊಂದಾದ ಅರಫಾ ಸಂಗಮ ಆರಂಭವಾಗಿದ್ದು ಸಾಮಾಜಿಕ ಅಂತರ ಪಾಲಿಸುವುದರೊಂದಿಗೆ ಅತೀವ ಆರೋಗ್ಯ ಮುನ್ನೆಚ್ಚರಿಕೆಯನ್ನು ಪಾಲಿಸಿ ಗುರುವಾರ ಬೆಳಗ್ಗೆ ಹತ್ತು ಗಂಟೆಗೆ ಯಾತ್ರಿಕರು ಅರಫಾಕ್ಕೆ ತಲುಪಿದ್ದಾರೆ.

ಸೌದಿಯ ವಿವಿಧ ಕಡೆಗಳಿಂದ ಬಂದ ಸ್ವದೇಶಿ, ವಿದೇಶಿಗಳ ಸಹಿತ 1,000ದಷ್ಟು ಯಾತ್ರಿಕರು ಈ ವರ್ಷದ ಹಜ್ಜ್‌ನ ಪ್ರಧಾನ ಕರ್ಮವಾದ ಅರಫಾ ಸಂಗಮದಲ್ಲಿ ಸೇರಲಿದ್ದಾರೆ. ಕೆಲವು ಭಾರತೀಯರು ಇದರಲ್ಲಿ ಸೇರಿದ್ದಾರೆ.

60 ಬಸ್‍ಗಳಲ್ಲಿ ಇವರು ಮಿನಾದಿಂದ ಹೊರಟರು. ದೇಹದ ಉಷ್ಣತೆ ಪರೀಕ್ಷಿಸಿದಾದ ಮೇಲೆ ಮಿನಾದ ವಾಸ್ತವ್ಯ ಸ್ಥಳದಿಂದ ಬಸ್‍ಗಳಲ್ಲಿ ಯಾತ್ರಿಕರನ್ನು ರೂಢಿಯಂತೆ ಜನನಿಭಿಡತೆಯಿಲ್ಲದ ರಸ್ತೆಗಳಲ್ಲಿ ಮಿನದಿಂದ ಹತ್ತು ಕಿಲೊ ಮೀಟರ್ ದೂರದಲ್ಲಿರುವ ಮೈದಾನಕ್ಕೆ ತುಂಬ ಕಡಿಮೆ ಸಮಯದಲ್ಲಿ ತಲುಪಿಸಲಾಯಿತು.

ರಸ್ತೆ ಯುದ್ದದಲ್ಲಿ ಟ್ರಾಫಿಕ್ ಹಾಗೂ ಸುರಕ್ಷೆ ಅಧಿಕಾರಿಗಳು ಇದ್ದರು. ವಿಶಾಲವಾದ ಮಸ್ಚಿದುನ್ನಮಿರದಲ್ಲಿ ಯಾತ್ರಿಕರು ಪ್ರಾರ್ಥನಾ ನಿರತರಾಗಿದ್ದರು. ಸಾಮಾಜಿಕ ಅಂತರ ಪಾಲಿಸುವ ಆಸನವನ್ನು ಮಸೀದಿಯೊಳಗೆ ಧಾರ್ಮಿಕ ವಿಷಯಗಳ ಇಲಾಖೆ ಸಿದ್ಧಪಡಿಸಿತ್ತು.

ಆರೋಗ್ಯ ನಿಗಾ ಮತ್ತು ಸೇವೆಗಾಗಿ ವಿಶೇಷ ತಂಡಗಳು ಮಸೀದಿಗಳಲ್ಲಿದ್ದವು. ಝುಹ್ರ್ ನಮಾಝ್ ಸಮಯದಲ್ಲಿ ನಡೆಯುವ ಅರಫಾ ಸಂಗಮ ಮತ್ತು ನಮಾಝ್‍ಗೆ ಉನ್ನತ ವಿದ್ವಾಂಸರ ಸಭೆಯ ಸದಸ್ಯ ರಾಯಲ್ ಕೋರ್ಟು ಸಲೆಗಾರ ಶೇಖ್ ಅಬ್ದುಲ್ಲ ಬಿನ್ ಸುಲೈಮಾನ್ ಅಲ್‍ಮನೀಅ್‌ ನೇತೃತ್ವವವನ್ನು ನೀಡಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here