ಹಲ್ಲೆಯ ನಂತರ ನಾವು ಹೆದರಿ ಹೆದರಿ ಜೀವಿಸುತ್ತಿದ್ದೇವೆ: ಘನ್ಸಾಲಿ, ಉತ್ತರಾಖಂಡ

0
410

ಘನ್ಸಾಲಿಯಲ್ಲಿ ಹದಿನೆಂಟರ ಹರೆಯದ ಯುವಕ ಆಝಾದ್ ಅಲ್ವೀ ಓರ್ವ ಹಿಂದು ಹುಡುಗಿಯೊಂದಿಗೆ ಹೋಟೇಲ್ ಒಂದರಲ್ಲಿರುವಾಗ ಸುಮಾರು 250ಕ್ಕಿಂತಲೂ ಹೆಚ್ಚಿನ ಜನರಿಂದ ಹಲ್ಲೆಗೊಳಗಾದನು. ಪೋಲಿಸರ ಕೈಗೆ ಆತನು ತಲುಪುವಾಗ ಅವನ ಕೊರಳಲ್ಲಿ ಚಪ್ಪಲಿಯ ಹಾರವಿತ್ತು.
ಇದಲ್ಲದೇ ಆಕ್ರೋಶಿತ ಗುಂಪು ಮುಸ್ಲಿಮರಿಗೆ ಸೇರಿದ ಸುಮಾರು 13 ಅಂಗಡಿಗಳನ್ನು ಧ್ವಂಸಗೊಳಿಸಿರುವುದಾಗಿ ಪೋಲಿಸರು ಹೇಳಿದ್ದಾರೆ.

“ಪರಿಸ್ಥಿತಿಯು ಸಂಪೂರ್ಣ ಹತೋಟಿಗೆ ಬರುವವರೆಗೂ ನಾವು ನಮ್ಮ ಅಂಗಡಿಗಳನ್ನು ತೆರೆಯುವುದಿಲ್ಲ. ನಮಗೆ ತೀವ್ರ ಭಯವು ಆವರಿಸಿದೆ” ಎಂದು ಬಿಜ್ನೂರ್ ನಲ್ಲಿ 20 ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಎಹ್ಸಾನ್ ಮನ್ಸೂರಿ ಹೇಳಿದ್ದಾರೆ.
” ಕೆಲವೊಂದು ಹಿಂದೂ ಸ್ನೇಹಿತರನ್ನು ಹೊರತು ಪಡಿಸಿ ನಾವು ಯಾರೊಂದಿಗೂ ಮಾತನಾಡುತ್ತಿಲ್ಲ. ನಾವು ಬಿಜ್ನೂರ್ ನಲ್ಲಿರುವಾಗ ಇಲ್ಲಿನ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿದವರು ಇವರೇ ಆಗಿದ್ದರು”ಎಂದು ಮನ್ಸೂರೀ ಹೇಳಿದ್ದಾರೆ.

ಝನ್ಸಾಲಿಯಲ್ಲಿ ಸರಿಸುಮಾರು 7೦೦೦ ಜನರು ಜೀವಿಸುತ್ತಿದ್ದು, ಈ ಹಿಂದೆ ಯಾವುದೇ ರೀತಿಯ ಕೋಮುಗಲಭೆಗಳನ್ನು ಈ ಪ್ರದೇಶವು ಕಂಡಿರಲಿಲ್ಲ. ಇಲ್ಲಿನ ಮುನ್ನೂರು ಅಂಗಡಿಗಳಲ್ಲಿ ಮೂವತ್ತು ಅಂಗಡಿಗಳು ಮುಸ್ಲಿಮರದ್ದಾಗಿದ್ದು ಅವುಗಳು ಬಾಡಿಗೆಗಾಗಿ ಪಡೆದುಕೊಂಡ ಅಂಗಡಿಗಳಾಗಿವೆ. ಈ ನಡುವೆ ಅಂಗಡಿಯ ಮಾಲಿಕರು ಅವುಗಳನ್ನು ಖಾಲಿ ಮಾಡುವಂತೆ ಒತ್ತಡ ಹೇರಿರುವುದು ಅವರ ಸಾಮಾನ್ಯ ವ್ಯಾಪಾರಿ ಜೀವನವು ದಿವಾಳಿಯಾಗಬಹುದೆಂಬ ಆತಂಕವು ದಿನೇ ದಿನೇ ಬಲವಾಗುತ್ತಿದೆ.

ಇದಲ್ಲದೇ ಹಿಂದೂ ವ್ಯಾಪಾರಿಗಳೆಲ್ಲರೂ ಸಭೆ ಸೇರುವ ಮೂಲಕ ಮುಸ್ಲಿಮರನ್ನು ಹೊರಗಿನವರೆಂದು ಅಲ್ಲಿಂದ ಹೊರದಬ್ಬಲು ಅಂಗಡಿಗಳ ಮಾಲಿಕರಿಗೆ ಒತ್ತಡ ಹೇರುತ್ತಿದ್ದಾರೆ.
” ನಾವು ನಿಜವಾಗಿಯೂ ಹೆದರಿದ್ದೇವೆ. ಈ ಸಮಸ್ಯೆ ಇನ್ನೂ ದೊಡ್ಡದಾಗುತ್ತದೆಯೋ ಎಂಬ ಆತಂಕ ನಮ್ಮಲ್ಲಿದೆ” ಎಂದು ಅಹ್ಮದ್ ಹೇಳಿದ್ದಾರೆ.
ಸ್ಥಳೀಯ ವ್ಯವಸ್ಥೆಯು ಪರಿಸ್ಥಿತಿಯು ಹತೋಟಿಯಲ್ಲಿರುವುದಾಗಿ ಹೇಳಿದ್ದು ನಿರ್ಭೀತಿಯಿಂದ ವ್ಯಾಪಾರ ನಡೆಸಬಹುದು ಎಂದು ಹೇಳಿದೆ.

” ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೋಲಿಸರನ್ನು ಈಗಾಗಲೇ ಅಲ್ಲಿಗೆ ಕಳುಹಿಸಲಾಗಿದ್ದು ಭದ್ರತೆಯು ಮುಂದುವರಿಯುವುದು “ಎಂದು ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಡಿಆರ್ ಚೌಹಾನ್ ಹೇಳಿದ್ದಾರೆ.
“ಈ ಪ್ರದೇಶದ ಇತಿಹಾಸದಲ್ಲಿ ಇಂತಹ ಘಟನೆಯು ಹಿಂದೆಂದೂ ಸಂಭವಿಸಿರಲಿಲ್ಲ. ಜನರು ಇದರಿಂದ ಭೀತಿಗೊಳಗಾಗಿದ್ದಾರೆ.
ಶಾಂತಿಪೂರ್ಣವಾಗಿದ್ದ ಈ ಪ್ರದೇಶಕ್ಕೆ ಈ ಘಟನೆಯು ದಕ್ಕೆಯನ್ನುಂಟು ಮಾಡಿದೆ” ಎಂದು ಛಮಿಯಾಲ ಮಾರುಕಟ್ಟೆಯಲ್ಲಿನ ಪತ್ರಿಕಾ ಏಜೆನ್ಸಿಗಾರ ಹಾಗೂ ಫೋಟೋಕಾಪಿ ಶಾಪ್ ಹೊಂದಿದ ವಿಜಯ್ ರಾವತ್ ತಿಳಿಸಿದ್ದಾರೆ.