ಶಶಿತರೂರ್, ರಾಜ್‍ದೀಪ್ ಸರ್ದೇಸಾಯಿ ವಿರುದ್ಧ ಹರಿಯಾಣದಲ್ಲೂ ದೇಶದ್ರೋಹ ಕೇಸ್

0
427

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಗಣರಾಜ್ಯೋತ್ಸವ ದಿನದಂದು ನಡೆದ ಟ್ರಾಕ್ಟರ್ ರ‌್ಯಾಲಿಗೆ ಸಂಬಂಧಿಸಿದ ಘರ್ಷಣೆಯಲ್ಲಿ ಶಶಿತರೂರ್ ಮತ್ತು ಪತ್ರಕರ್ತ ರಾಜ್‍ದೀಪ್ ಸರ್ದೇಸಾಯಿ, ಮೃಣಾಲ್ ಪಾಂಡೆ ವಿರುದ್ಧ ಹರಿಯಾಣದಲ್ಲಿಯೂ ದೇಶದ್ರೋಹ ಕೇಸು ದಾಖಲಿಸಲಾಗಿದೆ.

ಬಿಜೆಪಿ ಆಡಳಿತದ ಮೂರನೇ ರಾಜ್ಯದಲ್ಲಿಯೂ ಇವರ ವಿರುದ್ಧ ಒಂದೇ ಘಟನೆಗೆ ದೇಶದ್ರೋಹ ಪ್ರಕರಣ ದಾಖಲಾಗಿದೆ.

ಜರ್ಸಾದಲ್ಲಿ ಮಹಾವೀರ್ ಸಿಂಗ್‍ ಎಂಬವರು ನೀಡಿದ ದೂರಿನನ್ವಯ ಕೇಸು ದಾಖಲಾಗಿದೆ. ದೇಶದ ಸುರಕ್ಷೆಗೆ ಬಾಧಿಸುವ ತಪ್ಪಾದ ವಿಷಯಗಳನ್ನು ಇವರು ಟ್ವೀಟ್ ಮಾಡಿದ್ದಾರೆ ಎಂದು ಮಹಾಬೀರ್ ಸಿಂಗ್‍ ವಾದಿಸಿದ್ದಾರೆ.

ದೂರಿನಲ್ಲಿ ಗುರುಗ್ರಾಮ ಪೊಲೀಸರು ಕೂಡಲೇ ಕೇಸು ದಾಖಲಿಸಿಕೊಂಡಿದ್ದು,. ಸಫರ್ ಆಗ್ರ, ವಿನೋದ್ ಕೆ ಜೋಸ್ ಮುಂತಾದ ಪತ್ರಕರ್ತರ ವಿರುದ್ಧ ಗುರುಗ್ರಾಮ್ ಸೈಬರ್ ಸೆಲ್ ಎಫ್‍ಐಆರ್ ರಿಜಿಸ್ಟರ್ ಮಾಡಿದ್ದಾರೆ.

ಗಣರಾಜ್ಯೋತ್ಸವ ದಿನದಂದು ಟ್ರಾಕ್ಟರ್ ರ‌್ಯಾಲಿಯ ನಡುವೆ ರೈತರಿಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಸಂದೇಶಗಳನ್ನು ಹರಡಿದರೆಂದು ಹರಿಯಾಣ ಪೊಲೀಸರು ಕೇಸು ದಾಖಲಿಸಿದ್ದಾರೆ.

ಇದೇ ಘಟನೆಯಲ್ಲಿ ಉತ್ತರಪ್ರದೇಶ, ಮಧ್ಯಪ್ರದೇಶ ಪೊಲೀಸರು ದೇಶದ್ರೋಹ ಆರೋಪ ಹೊರಿಸಿ ಶಶಿ ತರೂರಿಗೂ ಹಾಗೂ ಪತ್ರಕರ್ತರ ವಿರುದ್ಧ ಕೇಸು ದಾಖಲಿಸಿದ್ದಾರೆ.