ಟ್ರಂಪ್ ಕೆಳಗಿಳಿಯುವುದರಲ್ಲಿ ಸಂತೋಷವಿದೆ: ಇರಾನ್ ಅಧ್ಯಕ್ಷ ಹಸನ್ ರೂಹಾನಿ

0
414

ಸನ್ಮಾರ್ಗ ವಾರ್ತೆ

ಟೆಹ್ರಾನ್: ಅಮೆರಿಕ ಅಧ್ಯಕ್ಷ ಸ್ಥಾನದಿಂದ ಡೊನಾಲ್ಡ್ ಟ್ರಂಪ್ ಕೆಳಗಿಳಿಯುವುದರಿಂದ ತುಂಬ ಸಂತೋಷವಾಗಿದೆ ಎಂದು ಇರಾನಿನ ಅಧ್ಯಕ್ಷ ಹಸನ್ ರೂಹಾನಿ ಹೇಳಿದ್ದಾರೆ.

ವೈಟ್ ಹೌಸ್‍ನಲ್ಲಿ ಜೊ ಬೈಡನ್ ಅಧ್ಯಕ್ಷ ಸ್ಥಾನಕ್ಕೆ ಬರುವುದರಿಂದ ಹೆಚ್ಚಿನ ಸಂತೋಷ ಇಲ್ಲದಿದ್ದರೂ ಟ್ರಂಪ್ ಹೋಗುವುದು ಸಂತೋಷದ ವಿಷಯ ಎಂದು ಹೇಳಿದ್ದಾರೆ.

ಇರಾನ್ ಸಚಿವ ಸಂಪುಟ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಟ್ರಂಪ್‍ರನ್ನು ಅತ್ಯಂತ ಕಟು ಭಾಷೆಯಲ್ಲಿ ಟೀಕಿಸಿದರು. ಅಮೆರಿಕದ ಅತ್ಯಂತ ಹೆಚ್ಚು ಕಾನೂನು ಉಲ್ಲಂಘಿಸುವ ವ್ಯಕ್ತಿ ಟ್ರಂಪ್ ಆಗಿದ್ದು, ಅವರು ಕೊಲೆಗಡುಕ ಕೂಡ ಆಗಿದ್ದಾರೆ ಎಂದು ಹೇಳಿದ್ದಾರೆ.