ರಾಜೀವ್ ಗಾಂಧಿ ಎಲ್ಲರನ್ನೂ ಪ್ರೀತಿಸಲು ಕಲಿಸಿದರು: ತಂದೆಯ ಕುರಿತು ರಾಹುಲ್ ಸ್ಮರಣೆ

0
601

ಹೊಸದಿಲ್ಲಿ,ಮೇ 21: ಪ್ರಧಾನಿ ರಾಜೀವ್ ಗಾಂಧಿಯವರ 28ನೆ ಪುಣ್ಯತಿಥಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತನ್ನ ತಂದೆ ಮಮತೆ, ಪ್ರೀತಿಯಿದ್ದ ವಾತ್ಸಲ್ಯ ಮೂರ್ತಿವೇತ್ತ ವ್ಯಕ್ತಿಯಾಗಿದ್ದರು ಎಂದು ಸ್ಮರಿಸಿದ್ದಾರೆ. ತಂದೆಯ ಕುರಿತು ಅವರು ಟ್ವಿಟರ್‌ನಲ್ಲಿ ಅವರು ಬರೆದಿದ್ದಾರೆ.

“ನನ್ನ ತಂದೆ ಗೌರವಾನ್ವಿತರು, ಪ್ರೀತಿ ವಾತ್ಸಲ್ಯಗಳನ್ನೊಳಗೊಂಡ ದಯಾಳುವಾಗಿದ್ದರು. ಎಲ್ಲರನ್ನೂ ಪ್ರೀತಿಸಲು ನಮಗೆ ಕಲಿಸಿದರು. ಯಾವತ್ತೂ ದ್ವೇಷಿಸದಿರಲು ಮತ್ತು ಕ್ಷಮಿಸಲು ಅವರು ಕಲಿಸಿ ಕೊಟ್ಟಿದ್ದಾರೆ. ತಂದೆಯನ್ನು ಪ್ರೀತಿ ಮತ್ತು ಕೃತಜ್ಞತೆಯಿಂದ ಸ್ಮರಿಸುತ್ತಿದ್ದೇನೆ ಎಂದು ರಾಹುಲ್ ಹೇಳಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಪುತ್ರಿ ಪ್ರಿಯಾಂಕಾ ಗಾಂಧಿ ಕೂಡ ತಂದೆಯನ್ನು ಸ್ಮರಿಸಿಕೊಂಡು ಬರೆದಿದ್ದಾರೆ” ನೀವು ಎಂದು ನನ್ನ ಹೀರೊ ಆಗಿರುವಿರಿ” ಎಂಬ ಟ್ವೀಟ್‍ನೊಂದಿಗೆ ಹರಿವಂಶರಾಯ್ ಬಚ್ಚನ್‍ರ ಅಗ್ನಿಪತ್ ಎನ್ನುವ ಕವಿತೆಯ ಕೆಲವು ಸಾಲುಗಳನ್ನು ಬರೆದಿದ್ದಾರೆ. ಜೊತೆಗೆ ತನ್ನ ಬಾಲ್ಯದಲ್ಲಿ ತಂದೆಯನ್ನು ಅಪ್ಪಿಹಿಡಿದ ಫೋಟೊವನ್ನು ಪ್ರಿಯಾಂಕಾ ಪೋಸ್ಟ್ ಮಾಡಿದ್ದಾರೆ.