ಸಿಂಧೂರ ಧರಿಸದ ಪತ್ನಿಯಿಂದ ಬೇರ್ಪಡಲು ವಿಚ್ಛೇದನಕ್ಕೆ ಅನುಮತಿ ನೀಡಿದ ಗುವಾಹಟಿ ಹೈಕೋರ್ಟ್

0
392

ಸನ್ಮಾರ್ಗ ವಾರ್ತೆ

ಗುವಾಹಟಿ: ಹಿಂದೂ ಆಚಾರ ಪ್ರಕಾರ ಸಿಂಧೂರವೂ ವಿಶೇಷ ಬಳೆಗಳನ್ನು ಧರಿಸದ್ದು ಪತ್ನಿ ಮದುವೆ ಸ್ವೀಕರಿಸಲು ಸಿದ್ಧವಿಲ್ಲದ್ದಕ್ಕೆ ಆಧಾರವಾಗಿದೆ ಎಂದು ಗುವಾಹಟಿ ಹೈಕೋರ್ಟು ತೀರ್ಪು ನೀಡಿದೆ. ವಿಚ್ಛೇದನಕ್ಕಾಗಿ ಪತಿಯು ಸಲ್ಲಿಸಿದ ಮನವಿಯಲ್ಲಿ ಹೈಕೋರ್ಟು ಈ ತೀರ್ಪು ನೀಡಿದೆ.

ತನ್ನನ್ನು ಪತಿ ಮತ್ತು ಆತನ ಮನೆಯವರು ಹಿಂಸೆಗೊಳಪಡಿಸಿದ್ದಾರೆ ಎಂದು ಯುವತಿಯ ದೂರು ಸರಿಯಲ್ಲ ಎಂದು ಜಸ್ಟಿಸ್ ಅಜಯ್ ಲಾಂಬ, ಜಸ್ಟಿಸ್ ಸೌಮಿತ್ರ ಸೈಕಿಯರಿದ್ದ ವಿಭಾಗೀಯ ಪೀಠ ಹೇಳಿದೆ.

ಸಿಂಧೂರ ಧರಿಸದ್ದು ತಾನು ಮದುವೆಯಾವಳಲ್ಲ ಎಂದು ಸೂಚಿಸುವ ಯತ್ನದ ಭಾಗವಾಗಿದೆ ಎಂದೂ ಪತಿಯೊಂದಿಗೆ ಕುಟುಂಬ ಜೀವನಕ್ಕೆ ಬಯಸುವುದಿಲ್ಲ ಎಂಬುದಕ್ಕೆ ಸಾಕ್ಷ್ಯವಾಗಿದೆ ಎಂದು ಕೋರ್ಟು ಹೇಳಿದೆ.

2012ರಲ್ಲಿ ದಂಪತಿಯ ಮದುವೆ ಆಗಿತ್ತು. 2013ರಿಂದ ಅವರು ಬೇರೆ ಬೇರೆಯಾಗಿ ಜೀವಿಸುತ್ತಿದ್ದಾರೆ. ಯುವತಿಯಿಂದ ಮದುವೆ ವಿಚ್ಛೇದನ ಕೋರಿ ಪತಿ ಮೊದಲು ಕುಟುಂಬ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದ. ಯುವತಿಯಿಂದ ಯಾವುದೇ ಕ್ರೂರ ಕಾರ್ಯ ಆಗಿಲ್ಲ ಎಂದು ಕುಟುಂಬ ನ್ಯಾಯಾಲಯ ಯುವಕನ ಅರ್ಜಿಯನ್ನು ತಳ್ಳಿಹಾಕಿದ ಬಳಿಕ ಆತ ಹೈಕೋರ್ಟಿನ ಮೊರೆಹೋಗಿದ್ದ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.