ಬಿಜೆಪಿಯ ಹಿಂದೆ ನಿಂತ ಹಿಂದಿ ಹೃದಯ ಭೂಮಿ

0
130

ಹೊಸದಿಲ್ಲಿ,ಮೇ 23: ಲೋಕಸಭಾ ಚುನಾವಣೆಯ ಮೊದಲ ಹಂತದ ಫಲಿತಾಂಶ ಹೊರಬಂದಾಗ ಹಿಂದಿ ಹೃದಯ ಭೂಮಿ ಬಿಜೆಪಿಯ ಜೊತೆ ನಿಂತಿದ್ದು ಕಂಡು ಬರುತ್ತಿದೆ. 2014ರಲ್ಲಿ ಎನ್‍ಡಿಎ ಗಳಿಸಿದ ಬಹುಮತವನ್ನು ಮೀರಿಸಿ ಈ ಬಾರಿಯೂ ಅದುವೆ ನಾಗಾಲೋಟದಲ್ಲಿದೆ. ಛತ್ತಿಸ್ ಗಡ, ರಾಜಸ್ಥಾನ, ಮಧ್ಯಪ್ರದೇಶ,ಉತ್ತರ ಪ್ರದೇಶದಲ್ಲಿ ಬಿಜೆಪಿ ಶಕ್ತಿಶಾಲಿ ಬೆಂಬಲವನ್ನು ಪಡೆದಿದೆ.

ರಾಜಸ್ತಾನದಲ್ಲಿ 25ರಲ್ಲಿ 23 ಸೀಟುಗಳಲ್ಲಿ ಬಿಜೆಪಿ ಮುಂದಿದೆ. ಎರಡೇ ಕಡೆ ಕಾಂಗ್ರೆಸ್ ಮುನ್ನಡೆಗಳಿಸಿದೆ. ಪ್ರತಿಪಕ್ಷಗಳಿಗೆ ಬಿಜೆಪಿಯ ಮುನ್ನಡೆಯನ್ನು ತಡೆಯಲು ಸಾಧ್ಯವಾಗಿಲ್ಲ. ಮಧ್ಯಪ್ರದೇಶದಲ್ಲಿ 29 ಸ್ಥಾನಗಳಲ್ಲಿ 27ರಲ್ಲಿಯೂ ಬಿಜೆಪಿ ಮುನ್ನಡೆಯಲ್ಲಿದೆ. ಮೊದಲ ಹಂತದ ವಿವರಗಳಿವು. ಮಧ್ಯಪ್ರದೇಶದಲ್ಲಿ ಕೂಡ ಎರಡು ಸೀಟುಗಳಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ.

ಉತ್ತರ ಪ್ರದೇಶದ 80 ಸೀಟುಗಳಲ್ಲಿ 53 ಸೀಟುಗಳಲ್ಲಿ ಕೂಡ ಬಿಜೆಪಿ ಮುನ್ನಡೆ ಸಾಧಿಸಿದೆ. ಕಳೆದ ಬಾರಿಗಿಂತ ಹದಿನೈದು ಸೀಟುಗಳಲ್ಲಿ ಬಿಜೆಪಿ ಹಿನ್ನಡೆಯಲ್ಲಿದೆ. ಬಿಎಸ್ಪಿ 14, ಎಸ್ಪಿ ಒಂಬತ್ತು ಮತ್ತು ಕಾಂಗ್ರೆಸ್ ಒಂದು ಕಡೆ ಮುನ್ನಡೆಯಲ್ಲಿದೆ. ಛತ್ತಿಸ್ ಗಡದ 11 ಸೀಟುಗಳಲ್ಲಿ ಎಂಟುಕಡೆಗಳಲ್ಲಿ ಬಿಜೆಪಿಗೆ ಮುನ್ನಡೆಯಿದೆ. ಮೂರು ಕಡೆ ಕಾಂಗ್ರೆಸ್ ಮತ್ತು ಒಂದು ಕಡೆ ಬಿಎಸ್ಪಿ ಮುನ್ನಡೆಯಲ್ಲಿದೆ.

ಕೇವಲ ಬಹುಮತಕ್ಕೆ 272 ಸೀಟುಗಳು ಬೇಕಾಗಿವೆ. ಬಿಜೆಪಿ ಏಕಪಕ್ಷವಾಗಿ 260ಕೂ ಹೆಚ್ಚು ಸೀಟುಗಳಲ್ಲಿ ಬಿಜೆಪಿ ಮುನ್ನಡೆ ಗಳಿಸಿದೆ. 320ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎನ್‍ಡಿಎ ಮುನ್ನಡೆಯಲ್ಲಿದೆ. ಕಳೆದ ಬಾರಿ ಎನ್‍ಡಿಎ 334 ಸ್ಥಾನಗಳನ್ನು ಗಳಿಸಿತ್ತು. ಅಷ್ಟು ಸಂಖ್ಯೆಯನ್ನು ಈಸಲವೂ ಎನ್‍ಡಿಎ ಗಳಿಸುವುದರಲ್ಲಿ ಸದ್ಯ ಸಂದೇಹ ವ್ಯಕ್ತಪಡಿಸಬೇಕಾಗಿಲ್ಲ.