ಎಲ್ಲ ಧರ್ಮಗಳಲ್ಲಿಯೂ ತೀವ್ರವಾದಿಗಳಿದ್ದಾರೆನ್ನುವುದನ್ನು ಇತಿಹಾಸದಲ್ಲಿ ಕಾಣಬಹುದು- ಕಮಲ್ ಹಾಸನ್

0
131

ಚೆನ್ನೈ,ಮೇ 17: ಸ್ವತಂತ್ರ ಭಾರತದ ಮೊದಲ ಹಿಂದೂ ತೀವ್ರವಾದಿ ನಾಥೂರಾಂ ಗೋಡ್ಸೆಯಾಗಿದ್ದ ಎನ್ನುವ ತನ್ನ ಹೇಳಿಕೆಯ ವಿರುದ್ಧ ಸಂಘ ಪರಿವಾರ ಸಂಘಟನೆಗಳು ಸಿಡಿದೆದ್ದ ನಂತರ ಕಮಲ್ ಹಾಸನ್ ಸ್ಪಷ್ಟೀಕರಣ ನೀಡಿದ್ದಾರೆ. ತನ್ನ ಹೇಳಿಕೆಗೆ ಬಂಧಿಸುವವರಿಗೆ ಹಾಗೆ ಮಾಡಬಹುದು. ಆದರೆ ಅದರ ಮೂಲಕ ಹೆಚ್ಚು ಸಮಸ್ಯೆ ಸೃಷ್ಟಿಸಲಾಗುತ್ತಿದೆ ಎಂದು ಮಕ್ಕಲ್ ನೀತಿ ಮಯ್ಯಂ ಅಧ್ಯಕ್ಷ ಕಮಲ್ ಹಾಸನ್ ಮಾಧ್ಯಮಗಳಿಗೆ ಹೇಳಿದರು.

ರಾಜಕೀಯ ಮೌಲ್ಯ ಕಳಕೊಂಡಿದೆ. ದಾಳಿಗೆ ಹೆದರುವುದಿಲ್ಲ. ಎಲ್ಲ ಧರ್ಮಗಳಲ್ಲಿಯೂ ತೀವ್ರವಾದಿಗಳಿದ್ದಾರೆ. ನಾವು ಪವಿತ್ರರೆಂದು ನಟಿಸಬೇಕಾಗಿಲ್ಲ. ಎಲ್ಲ ಧರ್ಮಗಳಲ್ಲಿಯೂ ತೀವ್ರವಾದಿಗಳಿದ್ದುದನ್ನು ಇತಿಹಾಸದಲ್ಲಿ ಕಾಣಬಹುದು ಎಂದು ಅವರು ಹೇಳಿದರು. ಕಳೆದ ದಿವಸ ಕಮಲ್‍ ಹಾಸನ್‍ರ ಚುನಾವಣಾ ರ‌್ಯಾಲಿಯ ವಿರುದ್ಧ ಸಂಘಪರಿವಾರ ಕಾರ್ಯಕರ್ತರು ಕೊಳೆತ ಮೊಟ್ಟೆ, ಕಲ್ಲೆಸೆತ ನಡೆಸಿದ್ದರು. ಹಿಂದೂ ಮುನ್ನಣಿ ಕಾರ್ಯಕರ್ತರು ದಾಳಿಯ ಹಿಂದಿದ್ದಾರೆ ಎಂದು ಹೇಳಲಾಗಿದೆ‌‌.