ಹುಸೈನಬ್ಬ ಹತ್ಯೆ: ಒಂದನೇ ಆರೋಪಿ ಸುರೇಶ್ ಮೆಂಡನ್ ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

0
855

ದೇಶದ ಗಮನ ಸೆಳೆದಿದ್ದ ಹಿರಿಯಡ್ಕ ಹುಸೈನಬ್ಬರ ಹತ್ಯೆಗೆ ಸಂಬಂಧಿಸಿದಂತೆ ಇವತ್ತು (ಶುಕ್ರವಾರ ) ರಾಜ್ಯ ಹೈಕೋರ್ಟಿನಲ್ಲಿ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಗೆ ಬಂದಿದ್ದು, ಪ್ರಕರಣದ ಮೊದಲ ಆರೋಪಿ ಸುರೇಶ್ ಮೆಂಡನ್ ಗೆ ಜಾಮೀನು ಹೈಕೋರ್ಟು ಜಾಮೀನು ನಿರಾಕರಿಸಿದೆ. ಆದರೆ, ಇತರ ಐವರು ಆರೋಪಿಗಳಾದ ಶೈಲೇಶ್ ಶೆಟ್ಟಿ, ಚೇತನ್ ಆಚಾರಿ, ರತನ್ ಆಚಾರಿ, ಉಮೇಶ್ ಶೆಟ್ಟಿ, ಕುಶಾಲ್ ನಾಯ್ಕ್ ಹಾಗೂ ಗಣೇಶ್ ನಾಯ್ಕ್ ಗೆ ಷರತ್ತುಬದ್ಧ ಜಾಮೀನು ನೀಡಿದೆ.

ದನ ಸಾಗಾಟದ ಆರೋಪದಲ್ಲಿ ಹುಸೈನಬ್ಬರನ್ನು ಥಳಿಸಿ ಹತ್ಯೆ ಮಾಡಲಾಗಿತ್ತು. ವಿಶೇಷ ಏನೆಂದರೆ, ಹಿರಿಯಡ್ಕ ಠಾಣೆಯ ಪಿಎಸೈ ಡಿ ಏನ್ ಕುಮಾರ್ ಅವರು ಚಾರ್ಜಶೀಟ್ ನಲ್ಲಿ ಹೆಸರಿಸಲಾದ ಹದಿನೈದು ಆರೋಪಿಗಳ ಪೈಕಿ ಎಂಟನೆಯವರಾಗಿ ಹೆಸರಿಸಲ್ಪಟ್ಟಿದ್ದಾರೆ. ಅವರು ಮತ್ತು ಠಾಣೆಯ ಜೀಪ್ ಚಾಲಕ ಎಸಿಪಿ ಗೋಪಾಲ ನಾಯ್ಕ ಅವರ ಸಮ್ಮುಖದಲ್ಲೇ ಘಟನೆ ನಡೆದಿದೆ ಎಂದು ಚಾರ್ಜಶೀಟ್ ನಲ್ಲಿ ಹೇಳಲಾಗಿದೆ.