ಹೈದರಾಬಾದ್ ಮುನ್ಸಿಪಲ್ ಚುನಾವಣೆ ಮತದಾನ ಪ್ರಗತಿಯಲ್ಲಿ; 74.67 ಲಕ್ಷ ಮಂದಿ ಮತಗಟ್ಟೆಗೆ

0
107

ಸನ್ಮಾರ್ಗ ವಾರ್ತೆ

ಹೈದರಾಬಾದ್,ಡಿ,1: ಚುನಾವಣಾ ಪ್ರಚಾರದ ಮೂಲಕ ದೇಶದ ಗಮನ ಸೆಳೆದ ಹೈದರಾಬದ್ ಮುನ್ಸಿಪಲ್ ಕಾರ್ಪೊರೇಷನ್ ಮತದಾನ ಪ್ರಗತಿಯಲ್ಲಿದೆ. ಬೆಳಗ್ಗೆ ಏಳು ಗಂಟೆಗೆ ಮತದಾನ ಆಂಭವಾಗಿದೆ. 74.67 ಲಕ್ಷ ಮತದಾರರು ಪಾಲ್ಗೊಳ್ಳಲಿದ್ದಾರೆ.

ತೆಲಂಗಾಣ ರಾಷ್ಟ್ರ ಸಮಿತಿ, ಬಿಜೆಪಿ, ಎಐಎಂಐಎಂ ಮೊದಲಾದ ಪಾರ್ಟಿಗಳು ಚುನಾವಣಾ ಪ್ರಚಾರದಲ್ಲಿ ಕೇಳಿ ಬಂದ ವಾಗ್ವಾದಗಳು ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಮುನ್ಸಿಪಲ್ ಚುನಾವಣಾ ಪ್ರಚಾರಕ್ಕೆ ಬಿಜೆಪಿಯಿಂದ ಕೇಂದ್ರ ಸಚಿವ ಅಮಿತ್ ಶಾ, ಜೆ.ಪಿ.ನಡ್ಡ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮೊದಲಾದವರು ಆಗಮಿಸಿದ್ದರು.

ರಸ್ತೆಗಳು, ನೀರು ವಿತರಣೆ, ಬೀದಿ ದೀಪ, ಡ್ರೈನೇಜ್, ಮೂಲಭೂತ ಸೌಕರ್ಯಗಳು ಚರ್ಚೆಯಾಗುವುದರ ಜೊತೆಗೆ ಹೈದರಾಬಾದಿನ ಹೆಸರನ್ನು ‘ಭಾಗ್ಯನಗರ’ ಮಾಡುವುದು ಕೂಡ ಪ್ರಚಾರದಲ್ಲಿ ಕೇಳಿ ಬಂದಿತ್ತು.

150 ವಿಭಾಗಗಳಲ್ಲಿ 1122 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಲ್ಕು ಜಿಲ್ಲೆಗಳನ್ನು ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಒಳಗೊಂಡಿದೆ. 2016ರಲ್ಲಿ ನಡೆದ ಚುನಾವಣೆಯಲ್ಲಿ ಟಿಆರ್‍ಎಸ್ 99 ಸೀಟು ಗೆದ್ದು ಅಧಿಕಾರಕ್ಕೆ ಬಂದಿತ್ತು. 9101 ಮತಗಟ್ಟೆಗಳಿದ್ದು ಎಲ್ಲ ಕಡೆ ಭಾರೀ ಬಂದೋಬಸ್ತು ಏರ್ಪಡಿಸಲಾಗಿದೆ. 50,000 ಪೊಲೀಸರನ್ನು ನಿಯೋಜಿಸಲಾಗಿದೆ. ರವಿವಾರ ಸಂಜೆ ಆರು ಗಂಟೆಗೆ ಚುನಾವಣಾ ಪ್ರಚಾರ ಕೊನೆಗೊಂಡಿತ್ತು.

ಕೊರೋನ ನಿಯಂತ್ರಣಗಳು ಇದ್ದುದರಿಂದ ಮತಗಟ್ಟೆಗೆ ಬರುವವರು ಮಾಸ್ಕ್ ಧರಿಸಿರಬೇಕು. ಎಲ್ಲ ಬೂತ್‍ಗಳನ್ನು ಅಣುಮುಕ್ತಗೊಳಿಸಬೇಕೆಂದು ಸೂಚನೆ ಹೊರಡಿಸಲಾಗಿತ್ತು. ಗ್ರೇಟರ್ ಹೈದರಾಬದ್ ಮುನ್ಸಿಪಲ್ ಕಾರ್ಪೊರೇಷನ್‍ನಲ್ಲಿ 63 ಕಂಟೈನ್ಮೆಂಟ್ ಝೋನ್‍ಗಳಿವೆ.