ಮದುವೆಯಾಗದ ಮಾಯಾವತಿಗೆ ಕುಟುಂಬದ ವಿಷಯ ಏನು ಗೊತ್ತು- ಕೇಂದ್ರ ಸಚಿವ ಅಠಾವಳೆ

0
64

ಹೊಸದಿಲ್ಲಿ,ಮೇ 17: ಪ್ರಧಾನಿ ನರೇಂದ್ರ ಮೋದಿ ಪತ್ನಿಯನ್ನು ತೊರೆದ ವ್ಯಕ್ತಿಯೆಂದು ಟೀಕಿಸಿದ ಬಿಎಸ್‍ಪಿ ಅಧ್ಯಕ್ಷೆ ಮಾಯಾವತಿ ವಿರುದ್ಧ ಕೇಂದ್ರ ಸಚಿವ ರಾಮದಾಸ್ ಅಠಾವಳೆ ರಂಗಪ್ರವೇಶಿಸಿದ್ದಾರೆ. ಮಾಯಾವತಿ ಮದುವೆ ಆಗದ ವ್ಯಕ್ತಿ ಅವರು; ಮೋದಿ ಮತ್ತು ಮೋದಿಯ ಪತ್ನಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಮದುವೆಯಾಗದ ಮಾಯಾವತಿಗೆ ಕುಟುಂಬ ವಿಷಯ, ಪತಿಯೊಂದಿಗೆ ವರ್ತಿಸುವುದು ಗೊತ್ತಿಲ್ಲ. ಮಾಯಾವತಿಯ ಬಗ್ಗೆ ಗೌರವವಿದೆ. ಆದರೆ ಅವರು ಇಂತಹ ಹೇಳಿಕೆ ನೀಡಬಾರದಾಗಿತ್ತು ಎಂದು ಅಠಾವಳೆ ಹೇಳಿದರು. ಮೋದಿ ಪತ್ನಿಯನ್ನು ತೊರೆದಂತೆ ಬಿಜೆಪಿ ನಾಯಕರು ತಮ್ಮ ಪತ್ನಿಯರನ್ನು ತೊರೆಯಬಹುದು ಎಂದು ಅವರ ಪತ್ನಿಯರಲ್ಲಿ ಹೆದರಿಕೆಯಿದೆ ಎಂದು ಮಾಯಾವತಿ ಈ ಹಿಂದೆ ಹೇಳಿಕೆ ನೀಡಿದ್ದರು.