ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ, ರಾಹುಲ್ ಗಾಂಧಿ ಅದಕ್ಕೆ ಹೊಣೆ- ಕೇಜ್ರಿವಾಲ್

0
397

ಹೊಸದಿಲ್ಲಿ,ಮೇ 11: ನರೇಂದ್ರ ಮೋದಿ ಅಧಿಕಾರಕ್ಕೆ ಮರಳಿದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅದಕ್ಕೆ ಜವಾಬ್ದಾರರು ಎಂದು ದಿಲ್ಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಾರ್ಟಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹೇಳಿದರು. ಉತ್ತರಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಸಖ್ಯಕ್ಕೆ, ಕೇರಳದಲ್ಲಿ ಎಡ ಪಕ್ಷಕ್ಕೆ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‍ಗೆ ಮತ್ತು ದಿಲ್ಲಿಯಲ್ಲಿ ತೃಣ ಮೂಲ ಕಾಂಗ್ರೆಸ್‍ಗೆ ಹಾನಿಯೆಸಗುವ ನಿಲುವನ್ನು ರಾಹುಲ್ ಸ್ವೀಕರಿಸಿದರು ಎಂದು ಕೇಜ್ರಿವಾಲ್ ಆರೋಪಿಸಿದರು.

ಕಾಂಗ್ರೆಸ್-ಆಮ್‍ ಆದ್ಮಿ ಸಖ್ಯ ಚರ್ಚೆಗಳು ವಿಫಲವಾಗಿದ್ದು ದಿಲ್ಲಿಯಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಕೇಜ್ರಿವಾಲ್ ರಾಹುಲ್ ವಿರುದ್ಧ ಕಟುವಾಗಿ ಹರಿಹಾಯ್ದರು. ಈ ಬಾರಿಯೂ ಕಾಂಗ್ರೆಸ್ ಬಿಜೆಪಿಯ ವಿರುದ್ಧವಲ್ಲ ಪ್ರತಿಪಕ್ಷಗಳ ವಿರುದ್ಧ ಸ್ಪರ್ಧಿಸುತ್ತಿರುವಂತೆ ನಡೆದುಕೊಳ್ಳುತ್ತಿದೆ. ವಿವಿಧ ರಾಜ್ಯಗಳಲ್ಲಿ ಪ್ರತಿಪಕ್ಷ ಪಾರ್ಟಿಗಳಿಗೆ ಅವರು ಘಾಸಿಯುಂಟು ಮಾಡಿದ್ದಾರೆ” ಎಂದು ಕೇಜ್ರಿವಾಲ್ ಆರೋಪಿಸಿದರು.

ಬಿಜೆಪಿ ಯಾವ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ಮೋದಿ, ಶಾರನ್ನು ಅಧಿಕಾರಕ್ಕೆ ಮರಳದಂತೆ ನೋಡುವುದು ನಮ್ಮ ಉದ್ದೇಶ. ಇವರಿಬ್ಬರನ್ನು ಬಿಟ್ಟು ಇತರ ಯಾರನ್ನೂ ತಾನು ಬೆಂಬಲಿಸುವೆ ಎಂದು ಕೇಜ್ರಿವಾಲ್ ಹೇಳಿದರು. ಈಸಲ ಆಮ್ ಆದ್ಮಿಗೆ ತುಂಬಾ ಪ್ರಯಾಸಕರ ಹೋರಾಟ ಇದೆ ಎಂದು ಒಂದು ವಾರದ ಹಿಂದೆ ಭಾವಿಸಿದ್ದೆವು. ಆದರೆ ಹತ್ತು ದಿವಸಗಳಲ್ಲಿ ವಿಷಯಗಳಲ್ಲಿಯೇ ಬದಲಾವಣೆಯಾಯಿತು. 2015ರ ವಿಧಾನಸಭಾ ಚುನಾವಣೆಯಲ್ಲಿ 67 ಸೀಟುಗಳನ್ನು ಗೆದ್ದಂತಹ ವಾತಾವರಣ ಈಗಿದೆ ಎಂದು ಕೇಜ್ರಿವಾಲ್ ಹೇಳಿದರು.