ಭಾರತದ ಬೆಳವಣಿಗೆ ದರ ಕುಸಿತ- ಐಎಂಎಫ್

0
455

ಸನ್ಮಾರ್ಗ ವಾರ್ತೆ

ದಾವೋಸ್, ಜ. 21: ಭಾರತದ 2019ರ ಬೆಳವಣಿಗೆ ದರವನ್ನು ಅಂತಾರಾಷ್ಟ್ರೀಯ ನಾಣ್ಯ ನಿಧಿ (ಐಎಂಎಫ್) ವರದಿಯು ಶೇ. 4.8ಕ್ಕಿಳಿಸಿದೆ. ಗ್ರಾಮೀಣ ಆದಾಯದ ಬೆಳವಣಿಗೆ ದುರ್ಬಲವಾಗಿದೆ. ಬ್ಯಾಂಕೇತರ ಆರ್ಥಿಕ ಕ್ಷೇತ್ರದಲ್ಲಿರುವ ಒತ್ತಡ ಬೆಳವಣಿಗೆಯನ್ನು ಕಡಿಮೆಗೊಳಿಸಿದೆಎಂದು ವಿಶ್ವ ಆರ್ಥಿಕ ಫಾರಂನ ಪೂರ್ವಭಾವಿ ಜಾಗತಿಕ ಅರ್ಥಿಕ ಪರಿಸ್ಥಿತಿಯ ಕುರಿತ ವರದಿಯಲ್ಲಿ ಐಎಂಎಫ್ ತಿಳಿಸಿದೆ.

ಆದರೆ 2020ರಲ್ಲಿಶೇ. 5.8 ಮತ್ತು 2021ರಲ್ಲಿ ಶೇ. 6.5 ಬೆಳವಣಿಗೆ ದರಕ್ಕೆ ತಲುಪಬಹುದು ಎಂದು ಭಾರತೀಯಳಾದ ಐಎಂಎಫ್ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಹೇಳಿದರು. ಬ್ಯಾಂಕೇತರ ಆರ್ಥಿಕ ಕ್ಷೇತ್ರದ ಹಿನ್ನೆಡೆ ಸಾಲದ ಪ್ರಮಾಣದಲ್ಲಿ ಕಡೆಮೆಯಾದ ಕಾರಣ ಭಾರತದ ಆಂತರಿಕ ಅಗತ್ಯ ಹಠಾತ್ ಕುಸಿತವಾಗಿದೆ.

ಇದೇವೇಳೆ ಅಮೆರಿಕದ ವ್ಯಾಪಾರ ಒಪ್ಪಂದದಿಂದಾಗಿ ಚೀನದ ಬೆಳವಣಿಗೆ ದರ ಶೇ.0.2 ಹೆಚ್ಚಳವಾಗಿ 2020ರಲ್ಲಿ ಶೇ.6ರಷ್ಟಾಗಲಿದೆ ಎಂದು ಗೀತಾ ವಿವರಿಸಿದ್ದಾರೆ. ಜಾಗತಿಕ ಆರ್ಥಿಕ ಬೆಳವಣಿಗೆ ದರ 2019ರಲ್ಲಿ ಕುಸಿತವಗಿದೆ ಎಂದು ಐಎಂಎಫ್ ವರದಿಯಲ್ಲಿ ತಿಳಿಸಲಾಗಿದೆ. 2019ರಲ್ಲಿ ಶೇ. 2.9ರಿಂದ 0.1 ಮತ್ತು 2021ರಲ್ಲಿ ಶೇ. 0.2 ಬೆಳವಣಿಗೆಯಾಗಬಹುದು ಎಂದು ಹೇಳಿದ್ದಾರೆ. ಅರ್ಜೆಂಟೀನಾ, ಇರಾನ್ ,ಟರ್ಕಿ ಮೊದಲಾದ ದೇಶಗಳ ಆರ್ಥಿಕ ಹಿನ್ನಡೆ ಮತ್ತು 2020ರ ಆರ್ಥಿಕ ಬೆಳವಣೆಯಗೆಯಲ್ಲಿ ಅನಿಶ್ಚಿತತೆ ಇದೆ ಎಂದು ಅವರು ಹೇಳಿದ್ದಾರೆ. ಭಾರತದಂತೆ ಅಭಿವೃದ್ಧಿಶೀಲ ದೇಶಗಳಾದ ಬ್ರಝಿಲ್, ಮೆಕ್ಸಿಕೊ ಕೂಡ ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.